ಶ್ರೇಯಸ್ ಗೆ ರೀಶ್ಮಾ ನಾಯಕಿ

ನಿರ್ದೇಶಕ ನಂದಕಿಶೋರ್ ಆ್ಯಕ್ಷನ್‍ಕಟ್ ಹೇಳಲು ಸಜ್ಜಾಗಿರುವ ಇನ್ನು ಹೆಸರಿಡದ ಶ್ರೇಯಸ್ ಮಂಜು ನಾಯಕರಾಗಿರುವ ಚಿತ್ರಕ್ಕೆ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಆಯ್ಕೆಯಾಗಿದ್ದಾರೆ..

ಮೊದಲ ಸಿನಿಮಾ “ಏಕ್ ಲವ್ ಯಾ” ತೆರೆಕಾಣುವ ಮೊದಲೇ ರೀಶ್ಮಾ ನಾಣಯ್ಯ ಮತ್ತೆರಡು ಹೊಸ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಅದರಲ್ಲಿ ಆ ದಿನಗಳು ನಾಯಕ ಚೇತನ್,ನಾಯಕನಾಗಿರುವ “ಮಾರ್ಗ ” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ

“ಏಕ್‍ಲವ್‍ಯಾ” ಸಿನಿಮಾದಲ್ಲಿ ರಾಣ ಜೊತೆ ನಾಯಕಿಯಾಗಿ ನಟಿಸಿರುವ ರೀಷ್ಮಾ ನಾಣಯ್ಯ ಇದೀಗ ನಂದಕಿಶೋರ್ ಚಿತ್ರಕ್ಕೆ ನಾಯಕಿಯಾಗಿ ಬಣ್ಣ ಹಚ್ಚಲು ಸಿದ್ದರಾಗಿದ್ದಾರೆ.

ಮಾಡೆಲಿಂಗ್ ನಿಂದ ಚಿತ್ರರಂಗಕ್ಕೆ ಕಾಲಿಟ್ಟ ರೀಷ್ಮಾ ನಾಣಯ್ಯಗೆ ಮೊದಲಿನಂದಲೂ ಚಿತ್ರರಂಗದಲ್ಲಿ ತಾನೊಬ್ಬ ನಟಿಯಾಗಬೇಕೆಂಬ ಕನಸಿತ್ತು. ಏಕ್‍ಲವ್‍ಯಾ ಚಿತ್ರದ ಮೂಲಕ ಅದು ನೆರವೇರಿದೆ.

ಗುಜ್ಜಲ್ ಪುರುಷೋತ್ತಮ್ ಶ್ರೇಯಸ್ ಹಾಗೂ ನಂದಕಿಶೋರ್ ಕಾಂಬಿನೇಶನ್‍ನಲ್ಲಿ ಮೂಡಿಬರುತ್ತಿರುವ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕೆ.ಪಿ.ಶ್ರೀಕಾಂತ್ ಜೊತೆ ಟಗರು ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಸದ್ಯ ಪ್ರೊಡಕ್ಷನ್ ನಂ.1 ಹೆಸರಿನಲ್ಲಿ ಚಿತ್ರದ ಸ್ಕ್ರಿಪ್ಟ್‍ವರ್ಕ್ ಆರಂಭವಾಗಲಿದೆ.