ಶ್ರುತಿ ಸಾಹಿತ್ಯ ಮೇಳ: ಕುವೆಂಪು ದಿನಾಚಾರಣೆ

ರಾಯಚೂರು.ಡಿ.೩೦- ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರು ಹಿಮಾಲಯ, ಕನ್ನಡ ಸಾರಸತ್ವ ಲೋಕದ ಮಹಾಚೇತನ, ಅವರು ಕನ್ನಡದ ಮೊದಲು ಜ್ಞಾನಪೀಠ ಪ್ರಶಸ್ತಿ ಪಡೆದು ಉಳಿದ ಕನ್ನಡ ಜ್ಞಾನಪೀಠ ಪ್ರಶಸ್ತಿಗಳಿಗೆ ಭದ್ರಬುನಾದಿ ಹಾಕಿದ ವಿಶ್ವ ಮಾನವತ್ವವನ್ನು ಸಾರಿದ ಮನುಜ ಮತದ ಕವಿ ಕುವೆಂಪು, ಎಂದು ಹಿರಿಯ ಸಾಹಿತಿ, ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಶ್ರೀಮತಿ ಡಾ.ಜಯಲಕ್ಷ್ಮೀ ಮಂಗಳಮೂರ್ತಿಯವರು ಹೇಳಿದರು.
ನಗರದ ಸಾಹಿತಿಕ, ಸಾಂಸ್ಕೃತಿಕ ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳದಿಂದ ಇಂದು ಸಂಜೆ ಜವಾಹರನಗರ ಪ್ರೌಢಶಾಲೆಯಲ್ಲಿ ಏರ್ಪಡಿಸಿ ರಾಷ್ಟ್ರಕವಿ ಕುವೆಂಪು ಅವರ ೧೧೬ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಮುರಳಿಧರ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡವೆಂದರೆ ಕುವೆಂಪು, ಕರ್ನಾಟಕ ಅನ್ನುವ ಹೆಸರಿಗೆ ಸರಿಸಮಾನವಾದಷ್ಟೆ ಪ್ರಸಿದ್ಧವಾದ ಹೆಸರು ಕುವೆಂಪು. ಕನ್ನಡದ ಅಸ್ಮಿತತೆಗೆ ದಕ್ಕೆ ಬಂದಾಗ ಸಿಡಿದೆದ್ದ ಮಹಾ ಪ್ರಗತಿಪರ ಚಿಂತಕ ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಎಲ್ಲಾದರು ಇರು ನೀ ಎಂತಾದರೂ ಇರು ನೀ ಕನ್ನಡವಾಗಿರು ಎಂದು ಹೇಳಿದ ರಸ ಋಷಿ, ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ ಕುವೆಂಪು ಎಂದು ಹೇಳಿದರು.
ಶ್ರುತಿ ಸಾಹಿತ್ಯ ಮೇಳದ ಪದಾಧಿಕಾರಿಗಳಿಂದ ಕುವೆಂಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಂದನೆ ಸಲ್ಲಿಸಲಾಯಿತು.
ಶ್ರೀಮತಿ ಮೀರಾ ಖೋನಾಪುರ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರುತಿ ಸಾಹಿತ್ಯ ಮೇಳದ ಪ್ರಧಾನ ಕಾರ್ಯದರ್ಶಿ ರಮೇಶ ಕುಲಕರ್ಣಿ ಸ್ವಾಗತಿಸಿದರು, ಕಾರ್ಯದರ್ಶಿ ಜೆ.ಎಂ.ವಿರೇಶ ನಿರೂಪಿಸಿದರು. ರವೀಂದ್ರ ಕುಲಕರ್ಣಿ ವಂದಿಸಿದರು.
ಈ ಸಂದರ್ಭದಲ್ಲಿ ಶ್ರುತಿ ಸಾಹಿತ್ಯ ಮೇಳದ ಪದಾಧಿಕಾರಿಗಳಾದ, ಖಜಾಂಚಿ ವಿಜಯಲಕ್ಷ್ಮಿ ಸೇಡಂಕರ್, ಪ್ರಾಣೇಶ ಫಡ್ನೀಸ್, ಪ್ರಸನ್ನ ಆಲಂಪಲ್ಲಿ, ಲಕ್ಷ್ಮಿಕಾಂತ ಮೊಹರೆ, ಜೆ.ಈರಣ್ಣ ವಕೀಲರು, ಶ್ರುತಿ ಸಾಹಿತ್ಯ ಮೇಳದ ಸದಸ್ಯರು ಮತ್ತು ಮುಂತಾದವರು ಉಪಸ್ಥಿತರಿದ್ದರು.

ಮುರಳಿಧರ ಕುಲಕರ್ಣಿ

ಮೊ: ೯೪೪೮೫೭೦೨೨೫