ಶ್ರುತಿ ಸಾಹಿತ್ಯ ಮೇಳದಿಂದ ಸಂಗೀತ ಸಾಧಕರಿಗೆ ಸನ್ಮಾನ

ರಾಯಚೂರು.ಆ.೦೨- ನಗರದ ಸಾಂಸ್ಕೃತಿಕ ಸಾಹಿತಿಕ ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ:೦೮-೦೮-೨೦೨೨ ರಂದು ಸೋಮವಾರ ಸಂಜೆ ೬.೦೦ ಗಂಟೆಗೆ ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡ “ಶ್ರುತಿ ಸೇರಿದಾಗ” ಸಂಗೀತ ಕಾರ್ಯಕ್ರಮದಲ್ಲಿ ನಗರದ ಖ್ಯಾತ ಸಂಗೀತ ಸಾಧಕರಿಗೆ ಸನ್ಮಾನಿಸಿ ಅಭಿನಂದಿಸಲಾಗುತ್ತಿದೆ.
ರಾಯಚೂರಿನ ಖ್ಯಾತ ಸಂಗೀತಗಾರರು ಹಾಗೂ ರಾಗಿಣಿ ಸಂಗೀತ ವಿದ್ಯಾಲಯದ ಪ್ರಾಚಾರ್ಯರಾದ ರಾಧಿಕಾ ರಾಘವೇಂದ್ರ ಕಾಂತನವರ ಇವರಿಗೆ ಮತ್ತು ಖ್ಯಾತ ತಬಲಾವಾದಕರು ಸಂಗೀತ ಶಿಕ್ಷಕರಾದ ಶ್ರೀಪಾದ ಲಕ್ಕಂದಿನ್ನಿ ಇವರಿಗೆ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ.
ಗಣನೀಯ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಅಭಿನಂದಿಸಲಾಗುತ್ತದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಮುರಳಿಧರ ಕುಲಕರ್ಣಿಯವರು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.