ಶ್ರೀ ಹುಲಿಗೆಮ್ಮದೇವಿ ಕಡೇ ಕಾರ್ತಿಕೋತ್ಸವ

ದಾವಣಗೆರೆ.ಜ..೧೨;: ಗಾಂಧಿನಗರದ ಶ್ರೀ ಹುಲಿಗೆಮ್ಮದೇವಿ ಕಡೇ ಕಾರ್ತಿಕೋತ್ಸವ ಇಂದು ರಾತ್ರಿ 8.30ಕ್ಕೆ ನೆರವೇರಲಿದೆ. ಇಂದು ಬೆಳಗ್ಗೆಶ್ರೀ ದೇವಿಗೆ ಅಭಿಷೇಕ ಮಾಡಲಾಗಿದ್ದು.ಶ್ರೀ ದೇವಿಗೆ ಬಾಳೆಯ ದಿಂಡಿನಿಂದ ಅಲಂಕೃತವಾದ ಕದಲಿ ಪೂಜೆಯೊಂದಿಗೆ ಶ್ರೀ ದೇವಿಯ ಕಾರ್ತಿಕೋತ್ಸವದ ಮಹಾ ಮಂಗಳಾರತಿ ನಡೆಯಲಿದ್ದು, ಸರ್ವ ಭಕ್ತಾಧಿಗಳು ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡು ಶ್ರೀ ಹುಲಿಗೆಮ್ಮದೇವಿ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.ರಾತ್ರಿ 10 ಗಂಟೆಗೆ ಶ್ರೀ ರೇವಣಸಿದ್ದೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.