ಶ್ರೀ ಹಾಲಶಂಕರ ಸ್ವಾಮಿಗಳು ಲಿಂಗೈಕ್ಯ

ಹಗರಿಬೊಮ್ಮನಹಳ್ಳಿ.ಜೂ.೦೪ ಪಟ್ಟಣದ ಹಳೆ ಊರಿನ ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮೀಜಿ (60)ಇಂದು ಬೆಳಗಿನ ಜಾವ
ದೈವ ದಿನ ರಾಗಿದ್ದಾರೆ .
ಅವರು ಬಹುದಿನಗಳಿಂದ ಅಂಗಾಂಗಗಳ ವೈಫಲ್ಯದಿಂದ ಬಳಸಿದ್ದು ಅವರು ಇಂದು ಬೆಳಗಿನ ಜಾವ ಬಳ್ಳಾರಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಪಾರ ಭಕ್ತರನ್ನು ಹೊಂದಿದ್ದ ಹಾಲಸ್ವಾಮಿ ಶಂಕರ ಹಲವಾರು ಕಾರ್ಯಕ್ರಮಗಳೊಂದಿಗೆ ಮಠವನ್ನು ಬೆಳೆಸಿ ಭಕ್ತರಿಗೆ ದಾರಿದೀಪವಾಗಿದ್ದಾರೆ. ಮಠದಲ್ಲಿ ಅನೇಕ ಸಾಮೂಹಿಕ ವಿವಾಹಗಳು ನೆರವೇರಿದವು ಜಾತ್ರೆ ತೇರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತದಲ್ಲಿ ಏರ್ಪಡಿಸುವ ಮೂಲಕ ಭಕ್ತರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು. ಪ್ರತಿ ಅಮಾವಾಸ್ಯೆಯಂದು ಮಠದಲ್ಲಿ ದಾಸೋಹ ನಡೆಯುತ್ತಿತ್ತು.. ಇವರ ನಿಧನದಿಂದ ಅಪಾರ ಭಕ್ತ ವೃಂದ ದುಃಖದಲ್ಲಿ ದೂಡಿದೆ. ಅವರ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ ಸರ್ಕಿಟ್ ಹೌಸ್ ಹತ್ತಿರ ಅನ್ನಪೂರ್ಣೇಶ್ವರಿ ಲೇಔಟ್
ಇಂದು ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ನೆರವೇರಲಿದೆ ಕುಟುಂಬಸ್ಥರಿಗೆ ಹಾಗೂ ಭಕ್ತಾದಿಗಳಿಗೂ ಶಿಷ್ಯವರ್ಗಕ್ಕೆ ಪಾಲ್ಗೊಂಡು ಅಂತ್ಯಕ್ರಿಯೆ ನಡೆಸಲಾಯಿತು.