ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಉತ್ತರಾಯಣ  ಪುಣ್ಯಕಾಲದ ವಿಶೇಷ

ಹರಿಹರ ಜ 8;  ಗುಹಾರಣ್ಯ  ಕ್ಷೇತ್ರವೆಂದೆ  ಪ್ರಸಿದ್ಧವಾಗಿರುವ ಶ್ರೀ ಹರಿಹರೇಶ್ವರ ಸ್ವಾಮಿ ಲಕ್ಷ್ಮಿ ಅಮ್ಮನವರ ದೇವಸ್ಥಾನದಲ್ಲಿ ಜ 9 ರಂದು ಉತ್ತರಾಯಣದ ವಿಶೇಷ ಅಲಂಕಾರ ಪೂಜೆ ಜರುಗುವುದು. ಶ್ರೀ ಹರಿಹರೇಶ್ವರ  ಲಕ್ಷ್ಮಿ ಅಮ್ಮನವರ ಮತ್ತು ಶ್ರೀ ರೈಲ್ವೆ ಆಂಜನೇಯ ದೇವಸ್ಥಾನ, ಶಿರಡಿ ಸಾಯಿಬಾಬಾ ಮಂದಿರ, ಗ್ರಾಮ ದೇವತೆ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳಲ್ಲಿ ಡಿ 17 ರಿಂದ ಧನುರ್ಮಾಸದ ವಿಶೇಷ ಪೂಜೆಗಳು ಪ್ರಾರಂಭಗೊಂಡು ಜ 15 ರಂದು ಮುಕ್ತಾಯಗೊಳ್ಳುತ್ತದೆ.ಪ್ರತಿ ವರ್ಷವಂತೆ ಈ ವರ್ಷವೂ ಧನುರ್ಮಾಸ ಬಳಗದವರಿಂದ 3ನೇ ವರ್ಷದ  ಜ 9 ರ ಮುಂಜಾನೆ 5 ಗಂಟೆಗೆ ಶ್ರೀ ಸ್ವಾಮಿ ಲಕ್ಷ್ಮಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ಕುಂಕುಮಾರ್ಚನೆ ಅಲಂಕಾರ ವಿಶೇಷ ಪೂಜೆ ಮಹಾ ಮಂಗಳಾರತಿ ನಂತರ ಶ್ರೀ ಓಂಕಾರ ಮಠದಲ್ಲಿ ಸರ್ವ ಭಕ್ತ ವೃಂದದವರಿಗೂ ಸಂಕಲ್ಪದೊಂದಿಗೆ ಪ್ರಸಾದ ವಿನಿಯೋಗ  ಇರುವುದರಿಂದ ಧನುರ್ಮಾಸದ ಸರ್ವ ಭಕ್ತ ವೃಂದದವರು ವಿಶೇಷ ಉತ್ತರಾಯಣ ಪುಣ್ಯ ಕಾಲದ ಪೂಜೆಯಲ್ಲಿ ಭಾಗವಹಿಸಿ ತನು ಮನದೊಂದಿಗೆ ಸಹಕರಿಸಿ ಶ್ರೀ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಧನುರ್ಮಾಸ  ಬಳಗದವರು ಮನವಿ ಮಾಡಿದ್ದಾರೆ