
ಚನ್ನಮ್ಮನ ಕಿತ್ತೂರು, ಏ 7: ಹನುಮಂತನನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲ ಕಷ್ಟಗಳಿಂದ ಮುಕ್ತಿ. ಏನಾದರೂ ಸಮಸ್ಯೆ, ಹೆದರಿಕೆ ಉಂಟಾದಾಗ ಹನುಮಾನ್ ಚಾಲೀಸಾ ಹೇಳಿದರೆ ಸಮಸ್ಯೆ ದೂರವಾಗುವುದೆಂದು ಸಮಾಜ ಸೇವಕಿ ಕುಮಾರಿ ಶಶಿಕಲಾ ಭಾವಿಕಟ್ಟಿ ಹೇಳಿದರು.
ಸಮೀಪದ ಇಟಗಿ ಗ್ರಾಮದಲ್ಲಿ ಶ್ರೀ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಕಳಸ ದೇಣಿಗೆಯಾಗಿ ನೀಡಿ ಮಾತನಾಡಿದ ಅವರು ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕಾಗಿ ನಮ್ಮಿಂದ ಅಳಿಲು ಸೇವೆ ಆಗಬೇಕು. ಅಂದಾಗ ಮಾತ್ರ ನಾವು ಮಾನವನಾಗಿ ಹುಟ್ಟಿದ್ದು ಸಾರ್ಥಕವಾಗುತ್ತದೆ ಸಮಾಜಕ್ಕಾಗಿ ನಾವು ದುಡಿದರೆ ನಮ್ಮನ್ನು ಸಮಾಜ ಗುರುತಿಸುತ್ತದೆ ಗ್ರಾಮಗಳಲ್ಲಿ ಎಲ್ಲರೂ ಒಗ್ಗೂಡಿಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ದೇವಾಲಯಗಳು ಮತ್ತು ಗ್ರಾಮಗಳು ಅಭಿವೃದ್ಧಿಗೊಳ್ಳುತ್ತವೆ ಎಂದರು.
ಪ್ರಾಸ್ತಾವಿಕವಾಗಿ ಈಶ್ವರ್ ಶೀಲಿ ಮಾತನಾಡಿದರು.
ವಾದ್ಯ ಮೇಳದೊಂದಿಗೆ ಆಂಜನೇಯ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಜರುಗಿತು. ನಂತರ ಅನ್ನಪ್ರಸಾದ ನೆರವೇರಿತು.
ಈ ವೇಳೆ ಪಾರಿವಾಡದ ಶ್ರೀ ಶ್ಯಾಡಲಿಂಗ ಮಹಾರಾಜರು, ರಾಜು ಗಾಳಿ, ರುದ್ರಪ್ಪ ಶಿವಣ್ಣವರ, ಪ್ರಶಾಂತ್ ಸಾನಿಕೊಪ್ಪ ಶೇಖರ್ ಸುಣಗಾರ, ಶೋಭಾ ಗಾಳಿ, ಶೈಲಾ ಬಡಸದ, ಸವಿತಾ ಗಾಳಿ, ಸೇರಿದಂತೆ ಇನ್ನಿತರರಿದ್ದರು.