ಶ್ರೀ ಸ್ಮಶಾನ ಹನುಮಾನ ಜಯಂತಿ ಉತ್ಸವ

ಕಲಬುರಗಿ:ಎ.5: ನಗರದ ಸೇಡಂ ರಸ್ತೆಯಲ್ಲಿರುವ ಶ್ರೀ ಸ್ಮಶಾನ ಹನುಮಾನ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಸ್ಮಶಾನ ಹನುಮಾನ ಜಯಂತಿ ಉತ್ಸವವು ಶ್ರೀ ಸ್ವತ್ತಿ ಶ್ರೀ ಮನೃಪ ಶಾಲಿವಾಹನ ಶಕೆ 1945 ಶೋಭನಾಮ ಶುಕ್ರನಾಮ ಸಂವತ್ಸರ ಉತ್ತರಾಯಣ ಚೈತ್ರಮಾಸ ಶುಕ್ಲ ಪಕ್ಷ ದವನದ ಹುಣ್ಣಿಮೆ ಹಸ್ತ ನಕ್ಷತ್ರದ ಏಪ್ರಿಲ್ 5 ಮತ್ತು 6 ರಂದು ಗುರವಾರ ಆಚರಿಸಲಾಗುವುದು.

ಏಪ್ರಿಲ್ 5 ರಂದುಬುಧುವಾರ ರಾತ್ರಿ 9 ರಿಂದ 4 ಗಂಟೆಗೆ ಶರಣ ನಗರÀ ಶ್ರೀ ಶರಣಬಸವೇಶ್ವರ ಸಂಗೀತಾ ಭಜನಾ ಮಂಡಳಿಯವರು ಭಜನೆ ನಡೆಸಿಕೊಡುವರು.

ಏಪ್ರಿಲ್ 6 ರಂದು ಗುರವಾರ ಬೆಳ್ಳಗ್ಗೆ 4ರಿಂದ 5-45 ರವರೆಗೆ ಮಹಾ ಮಸ್ತಾಭಿಷೇಕ, ಮಹಾ ಅಲಂಕಾರ, ಸೂರ್ಯೋದಯಕ್ಕೆ ಮಹಾಮಂಗಳಾರತಿ ಜರುಗುವುದು.

ಬೆಳ್ಳಗ್ಗೆ 7-30 ರಿಂದ 9 ರವರೆಗೆ ಹೋಮ ಪೂಜೆ ಮಹಾಯಜ್ಞ ನಡೆಯುವುದು.