
ದಾವಣಗೆರೆ. ಮಾ.೧೭; ನಗರದ ನಿಟ್ಟುವಳ್ಳಿ ರಸ್ತೆಯಲ್ಲಿರುವ ಶ್ರೀ ಸೋಮೇಶ್ವರ ವಿದ್ಯಾಲಯವು ಕಳೆದ 18 ವರ್ಷಗಳ ಹಿಂದೆ ಸ್ಥಾಪಿತವಾಗಿದ್ದು, ಮಕ್ಕಳಲ್ಲಿ ಪಠ್ಯದ ಜೊತೆಗೆ ಪೋಷಕರೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಸೆಯುವ ನಿಟ್ಟಿನಲ್ಲಿ ಸತತ ಪ್ರಯತ್ನಶೀಲನಾಗಿದ್ದು, ಇದರಲ್ಲಿ ಯಶಸ್ವಿಯಾಗಿದ್ದು ಅಂತಹ ಭಾವನಾತ್ಮಕ ಕಾರ್ಯಕ್ರಮಗಳಲ್ಲಿ ಒಂದಾದ ಜನ್ಮಭೂಮಿ ಮತ್ತು ಜನ್ಮದಾತರಿಗೊಂದು ನಮನ ಕಾರ್ಯಕ್ರಮವನ್ನ ಇಂದು ಸಂಜೆ 5.45 ಕ್ಕೆ ಸೋಮೇಶ್ವರ ಶಾಲೆಯಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ 10 ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಶಾಸಕರಾದ ಎಸ್ ಎ ರವೀಂದ್ರನಾಥ್ ರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು, ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷರಾದ ಕಂಚಿಕೆರೆ ಸುಶೀಲಮ್ಮ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಇನ್ನೂ ದಕ್ಷಿಣ ಕರ್ನಾಟಕ ಸಹಪ್ರಾಂತ ಕಾರ್ಯವಹ ಸ್ವಯಂ ಸೇವಕ ಸಂಘದ ಪಟ್ಟಾಭಿರಾಂ ಶಿವಮೊಗ್ಗ ಇವರು ದಿಕ್ಸೂಚಿ ನುಡಿ ಕುರಿತು ಮಾತನಾಡಲಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿಗಳಾದ ಕೆ.ಎಂ ಸುರೇಶ್ ತಿಳಿಸಿದ್ದಾರೆ.