ಶ್ರೀ ಸೂಗೂರೇಶ್ವರ ವಿದ್ಯಾನಿಕೇತನ ಶಾಲೆ – ಶಿಕ್ಷಕರ ದಿನಾಚರಣೆ

ರಾಯಚೂರು.ಸೆ.೦೬- ಶ್ರೀ ಸೂಗೂರೇಶ್ವರ ವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆದ್ದೂರಿಯಾಗಿ ಆಚರಿಸಲಾಯಿತು.
ಶಾಲಾ ಅಧ್ಯಕ್ಷರಾದ ಸುಲೋಚನಾ ಬಸವರಾಜ ಸ್ವಾಮಿ ಆಲ್ಕೂರ್ ಅವರು ಹಾಗೂ ಶಿಕ್ಷಕರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವೀರೇಶ್, ಸುಮಾ, ವಿಜಯ ಲಕ್ಷ್ಮೀ ರವರಿಗೆ ಉತ್ತಮ ಶಾಲಾ ಶಿಕ್ಷಕರೆಂದು ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಸುಲೋಚನಾ ಬಸವರಾಜ ಸ್ವಾಮಿ ಆಲ್ಕೂರ್, ಶಾಲಾ ಕಾರ್ಯದರ್ಶಿಗಳಾದ ಬಸವರಾಜ ಸ್ವಾಮಿ ಆಲ್ಕೂರ್, ಶಾಲಾ ಆಡಳಿತ ಮಂಡಳಿ ಸದಸ್ಯರಾದ ತೇಜಸ್ ಶಿವಾನಂದ, ಸುಪ್ರಿಯಾ, ಜ್ಯೋತಿ, ಮುಖ್ಯಗುರುಗಳಾದ ಜಂಬಣ್ಣ, ವೆಂಕಟೇಶ ಹಾಗೂ ಎಲ್ಲಾ ಶಿಕ್ಷಕರು ಸೇರಿದಂತೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.