ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕಲ್ಯಾಣೋತ್ಸವ

 ದಾವಣಗೆರೆ ನ.12.  ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ಸೊರ ಸಂಹಾರ ಷಷ್ಟಿ  ಪ್ರಯುಕ್ತ  ನಗರದ  ಲೋಕಕ್ಕೆ ರಸ್ತೆ ಎಸ್ ಎ ರವೀಂದ್ರನಾಥ್ ಬಡಾವಣೆಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ  ವಿಶೇಷ ಅಲಂಕಾರ ಪಂಚಾಮೃತ ಅಭಿಷೇಕ, ಸಹಸ್ರಪುಷ್ಪ ನಾಮಾವಳಿ  ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕಲ್ಯಾಣೋತ್ಸವವನ್ನು  ಅರ್ಚಕರಾದ ಅನಿಲ್ ಶರ್ಮ ಮತ್ತು ಸಂಗಡಿ ಗರಿಂದ  ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಕಲ್ಯಾಣೋತ್ಸವದಲ್ಲಿ  ಭಾಗವಹಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.