ಶ್ರೀ ಸುಬ್ರಮಣ್ಯ ಸ್ವಾಮಿಯ ಉತ್ಸವ ಮೂರ್ತಿಗಳ ಮೆರವಣಿಗೆ

ದಾವಣಗೆರೆ.ಜು.22: ನಗರದ ಲೋಕಿಕೆರೆ ರಸ್ತೆಯಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ಸೇವಾ ಸಮಿತಿಯಿಂದ  ಶ್ರೀ ಸುಬ್ರಮಣ್ಯ ಸ್ವಾಮಿಯ ಆಷಾಢ ಜಾತ್ರೆ ಮಹೋತ್ಸವ ಇಂದು ಬೆಳಿಗ್ಗೆ  ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಭರಣಿ ಕಾವಡಿ ಉತ್ಸವ ಮೂರ್ತಿಗಳು ವಾದ್ಯ ಮೇಳಗಳೊಂದಿಗೆ ರಾಜಬೀದಿಗಳ ಮೂಲಕ ಶೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತರಲಾಯಿತು.ನಾಳೆ  ಆಷಾಡ ಜಾತ್ರೆ ಮಹೋತ್ಸವ ನಡೆಯಲಿದೆ ಈ ಪೂಜಾ ಮಹೋತ್ಸವಕ್ಕೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಪಾಲಿಕೆ ಸದಸ್ಯೆ ಗೀತಾ ನಾಗರಾಜ್ ಆಗಮಿಸಲಿದ್ದಾರೆ ಎಂದು ದೇವಾಲಯದ ಕಮಿಟಿ ಸದಸ್ಯರು ತಿಳಿಸಿದ್ದಾರೆ.