ಶ್ರೀ ಸುಕುಮಾರ ಸಿರಿ ಪ್ರಶಸ್ತಿ ಪ್ರದಾನ

ಅಫಜಲಪುರ,ಮಾ.30-ತಾಲ್ಲೂಕಿನ ಸುಕ್ಷೇತ್ರ ಹಿಂಚಿಗೇರಾ ಗ್ರಾಮದ ಶ್ರೀ ಶಿವಯೋಗೀಶ್ವರ 37ನೇ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ನಡೆದ ಭೀಮಾಂಬಿಕೆ ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಠದ ಒಡೆಯರಾದ ಶಂಭುಲಿಂಗ ಶಿವಯೋಗಿ ಶಿವಾಚಾರ್ಯರ ಸಾನಿಧ್ಯದಲ್ಲಿ ನಾಗಣಸುರ ತಪ್ಪಿನ ವಿರಕ್ತಮಠದ ಪೀಠಾಧಿಪತಿಗಳಾದ ಡಾ.ಅಭಿನವ ಬಸವಲಿಂಗ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ನಾಡಿನ ಖ್ಯಾತ ಪುರಾಣ, ಪ್ರವಚನ, ಕೀರ್ತನಕಾರರು ಯುವ ಸಾಹಿತಿಗಳಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿಗಳಿಗೆÀ, ಯುವ ಗಾಯಕರಾದ ಚೇತನ ಸ್ವಾಮಿ ಬೀದಿಮನಿ ಅವರಿಗೆ ಹಾಗೂ ಯುವ ತಬಲಾ ವಾದಕರಾದ ಸಿ.ಸಂದೀಪ ಗುತ್ತಿಗೆನೂರ ಅವರಿಗೆ “ಶ್ರೀ ಸುಕುಮಾರ ಸಿರಿ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲಯ್ಯ ಸ್ವಾಮಿ ಹಿರೇಮಠ, ರಮೇಶ ಬಡದಾಳ, ಎಸ್.ಎಸ್. ಪಾಟೀಲ್, ನಾಗಯ್ಯ ಸ್ವಾಮಿ ನಾಗಣಸೂರ, ಹಣುಮಂತರಾಯ ಬಿರಾದರ, ಪರಮೇಶ್ವರ ಆನೂರು, ಶಿವಾನಂದ ಮಧುಗುಣಕಿ, ಲಕ್ಷ್ಮಿಪುತ್ರ ಸಾಗರ್, ಶ್ರೀಶೈಲ್ ಹಿರೇಮಠ, ನಾನಾಗೌಡ ಪಾಟೀಲ್, ಈರಣ್ಣ ಸುತಾರ್ ಹಾಗೂ ಇಂಚಿಗೇರಿ ಶಿನ್ನೂರ್ ಗ್ರಾಮದ ಸದ್ಭಕ್ತ ಉಪಸ್ಥಿತರಿದ್ದರು.