ಶ್ರೀ ಸಿಮೆಂಟ ಕಂಪನಿಯ ಮುಂಭಾಗ ಕರವೇಯಿಂದ ಉಪವಾಸ ಸತ್ಯಾಗ್ರಹ

ಸೇಡಂ, ನ,12: ಇಂದು ಬೆಳಿಗ್ಗೆ ಶ್ರೀ ಸಿಮೆಂಟ್ ಕಂಪೆನಿಯ ಕೊಡ್ಲಾ ಎದುರುಗಡೆ ಸರೋಜಿನಿ ಮಹಿಷಿ ವರದಿ ಪ್ರಕಾರ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಬೇಕು ನೆನೆಗುದಿಗೆ ಬಿದ್ದ ಬೆನಕನಹಳ್ಳಿ ರಸ್ತೆ ಅತಿ ಶೀಘ್ರದಲ್ಲಿ ದುರಸ್ತಿ ಮಾಡಬೇಕೆಂದು ಬೆಳಿಗ್ಗೆ 8:00 ಗಂಟೆಯಿಂದ 1 ಗಂಟೆಯವರೆಗೆ ಉಪವಾಸ ಸತ್ಯಾಗ್ರಹವನ್ನು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ರಾಮಚಂದ್ರ ಗುತ್ತೇದಾರ್ ನೇತೃತ್ವದಲ್ಲಿ ನಡೆಯಿತು.
ಕುಳಿತ ಸ್ಥಳಕ್ಕೆ ಕಾರ್ಖಾನೆಯ ಸಂಬಂಧಪಟ್ಟ ಅಧಿಕಾರಿ ಅಜಯ್ ಲಾಲ್, ಜಗದೀಶ್ ಉಪತಹಸೀಲ್ದಾರ್ ಅಣವೀರಪ್ಪ ಪಿಡಬ್ಲ್ಯೂಡಿ ಸಿಬ್ಬಂದಿ ಗಣೇಶ್, ಜಗದೀಶ್ ಬಂದು ತಮ್ಮ ಬೇಡಿಕೆಗಳು ಈಡೇರಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಉರುಳು ಸೇವೆ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಪತ್ರ ನೀಡಿದ್ದರು. ಈ ವೇಳೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅನೇಕರು ಉಪಸ್ಥಿತರಿದ್ದರು