ಶ್ರೀ ಸಿಮೆಂಟ್ ಕಂಪನಿ ವಿರುದ್ಧ ರೈತರ ಆಕ್ರೋಶ

ಚಿತ್ತಾಪುರ: ಮಾ.12:ತಾಲೂಕಿನ ಡೋಣಗಾಂವ್ ಹತ್ತಿರದ ಶ್ರೀ ಸಿಮೆಂಟ್ ಕಂಪನಿಯು ರೈತರಿಂದ ಜಮೀನು ಖರೀದಿಸಿ ಸರಿಸಮ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿ ಕಂಪನಿಗೆ ಭೂಮಿ ನೀಡಿದ ರೈತರು ಕಂಪನಿಯ ವಿರುದ್ಧ ಸಿಡಿದೆದ್ದು ಶ್ರೀ ಸಿಮೆಂಟ್ ಗೇಟ್ ಗಳು ಹಾಗೂ ಸಿಮೆಂಟ್ ಉತ್ಪಾದನೆ ನಿಲ್ಲಿಸಿ ರೈತರು ಅಹೋ ರಾತ್ರಿ ಪ್ರತಿಭಟನೆ ನಡೆಸಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ್ ಮಾತನಾಡಿ ರೈತರ ಬೇಡಿಕೆಗಳಾದ ರೈತರ ಮಕ್ಕಳಿಗೆ ಕಂಪನಿಯಲ್ಲಿ ಕಾಯಂ ನೌಕರಿ ನೀಡಬೇಕು. ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಜಾಮೀನು ಖರೀದಿ ಮಾಡಬೇಕು. ರೈತರ ಮೇಲಿನ ಪ್ರಕರಣಗಳು ಹಿಂಪಡೆಯಬೇಕು. ರೈತರ ಮಕ್ಕಳಿಗೆ ವೆಜ್ ಬೋರ್ಡ್ ಅನುಸಾರ ವೇತನ ನೀಡಬೇಕು. ಹೀಗೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ರೈತರ ಪ್ರತಿಭಟನೆಗೆ ಶ್ರೀ ಸಿಮೆಂಟ್ ಕಂಪನಿ ಸ್ಪಂದಿಸುತ್ತಿಲ್ಲ. ಎಂಬ ಕಾರಣಕ್ಕೆ ಕೊಡ್ಲಾ, ಬೆನಕನಹಳ್ಳಿ, ಡೋಣಗಾಂವ್, ರಾಜೋಳಾ, ಹುಳಗೋಳ, ಹೀಗೆ ಸುತ್ತಮುತ್ತಲಿನ ಗ್ರಾಮದ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ ಇವರ ಈ ಒಂದು ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದ್ದು ಇವರಿಗೆ ನ್ಯಾಯ ಸಿಗುವವರೆಗೂ ನಾನು ಸಹ ಇವರ ಜೊತೆಯಲ್ಲಿ ನ್ಯಾಯ ಕೊಡಿಸುವುದಾಗಿ ತಿಳಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದಾಗ ಮಧ್ಯರಾತ್ರಿ ಪಿಎ??? ಮಂಜುನಾಥ ರೆಡ್ಡಿ ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸಿದರು.

ಈ ಸಂದರ್ಭದಲ್ಲಿ ಸುನೀತಾ ತಳವಾರ್, ಹಮ್ ಆದ್ಮಿ ಪಾರ್ಟಿಯ ಮುಖಂಡ ಜಗದೀಶ್ ಸಾಗರ್, ಹಣಮಂತ, ಶರಣಪ್ಪ, ಕಾಶಿಮ್ ಅಲಿ, ಶಾಂತಪ್ಪ ಅವಂಟಿ, ಸಾಬಣ್ಣ ಮನೆಗರ್, ಕಾಶಪ್ಪ ತಳವಾರ್, ಕಾಶಣ್ಣ ಪಾಪಳ್ಳಿ, ಭೀಮರಾಯ, ಮಲ್ಲು ಡಿವಟಿಗಿ, ಸರಸ್ವತಿ ಪಾಪಳ್ಳಿ, ಮಾಳಮ್ಮ ಬಾಗೋಡಿ, ಮಹಾದೇವಮ್ಮ, ಸೇರಿದಂತೆ ನೂರಾರು ರೈತರು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಶ್ರೀ ಸಿಮೆಂಟ್ ಕಂಪನಿ ಆಡಳಿತ ಮಂಡಳಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಬೇಡಿಕೆಗಳ ಕುರಿತು ಸೋಮವಾರ ಮಾತುಕತೆ ನಡೆಸುವ ಲಿಖಿತ ರೂಪದಲ್ಲಿ ಬರೆದು ಭರವಸೆ ನೀಡಿದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನು ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

  • ಶೇರ್ ಅಲಿ.
    ರೈತ ಯುವ ಮುಖಂಡರು