
ಮುನವಳ್ಳಿ,ಏ26 : ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಶ್ರೀ ಸಾಯಿಬಾಬಾ 28 ನೇ ವಾರ್ಷಿಕೋತ್ಸವದ ಅಂಗವಾಗಿ ದಿ.24 ರಿಂದ 4 ದಿನಗಳವರೆಗೆ ಜರಗುವ ಶ್ರೀ ಸದ್ಗುರು ಸಿದ್ಧಾರೂಢರ ಮಹಾತ್ಮೆ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು, ಜೋಡಕುರಳಿಯ ಶ್ರೀ ಸದ್ಗುರು ಚಿದ್ಘನಾನಂದ ಭಾರತಿ ಶ್ರೀಗಳು ನೆರವೇರಿಸಿದರು.
ಮುರುಘೇಂದ್ರ ಶ್ರೀಗಳು ಮಾತನಾಡಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮೇಲಿಂದ ಮೇಲೆ ಸಾಯಿಬಾಬಾ ಮಂದಿರದಲ್ಲಿ ಜರುಗುವುದು ಶ್ಲಾಘನೀಯ. ಸಾಯಿಬಾಬಾನ ಪವಾಡ ಹಾಗೂ ಸಿದ್ಧಾರೂಢರ ಪವಾಡಗಳನ್ನು ಈಗಿನ ಯುವಕರಿಗೆ ತಿಳಿಯುವಹಾಗೆ 5 ದಿನ ಪ್ರವಚನ ಜರುಗುವದು. ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದರು.
ವಿಜಯ ಅಮಠೆ, ಶ್ರೀಶೈಲ ಹರೇಮಠ, ಅಪ್ಪು ತಾಂದಳೆ, ಮಹಾಂತಯ್ಯ ವೀರುಪಯ್ಯನರಮಠ, ಈಶ್ವರ ಶಿವಪೇಟಿ, ಪ್ರಕಾಶ ಯಕ್ಕುಂಡಿ, ಈರಣ್ಣ ಮುದಗಲ, ರಾಜು ಶಾಸ್ತ್ರಿ, ಕಲ್ಲನಗೌಡ ಬಿಕ್ಕನಗೌಡ, ರವಿ ಗೊಂದಿ, ಸಾಯಿ ಸೇವಾ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.
ಬಾಳು ಹೊಸಮನಿ ಕಾರ್ಯಕ್ರಮ ಸ್ವಾಗತಿಸಿ ವಂದಿಸಿದರು.