ಶ್ರೀ ಸಿದ್ಧಾರೂಢರ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

ಅಣ್ಣಿಗೇರಿ,ನ8: ಶ್ರೀ ಸಿದ್ಧಾರೂಡರ ಆಧ್ಯಾತ್ಮಿಕ ಪ್ರವಚನ ಪಟ್ಟಣದ ಪುರದೀರೇಶ್ವರ ದೇವಸ್ಥಾನ ಬಯಲಿನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ತಿಕ ಮಾಸದ ಅಂಗವಾಗಿ 12ನೇ ವರ್ಷದ ಶ್ರೀ ಜಗದ್ಗುರು ಸಿದ್ಧಾರೂಢರ ಜೀವನಚರಿತ್ರೆ ಪುರಾಣ ಪ್ರವಚನ ಸಮಾಪ್ತಗೊಂಡಿತು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶ್ರೋ ಬ್ರಹ್ಮ ಶಿವಕುಮಾರ ಮಹಾಸ್ವಾಮಿಗಳು ದಾಸೋಹ ಮಠ ಅಣ್ಣಿಗೇರಿ, ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ನೀಲಗು0ದ ಮತ್ತು ಪ್ರವಚನಕಾರರಾದ ಡಾ.ಎ. ಸಿ. ವಾಲಿ ಮಹಾರಾಜರು ಇಂಚಗೇರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರೀ ಜಗದ್ಗುರು ಸಿದ್ಧಾರೂಢರು ಜಗದ ದೈವಸ್ವರೂಪಿ. ಅವರು ಶಾಂತಿ ಸ್ವಭಾವದವರಾಗಿದ್ದರು. ಇಡೀ ಮಾನವ ಕುಲಕ್ಕೆ ಶ್ರಮಿಸಿದ ಒಬ್ಬ ಯೋಗಿ. ಸಿದ್ಧಾರೂಢರ ಜೋಳಿಗೆ ಜಗಕೆಲ್ಲ ಹೋಳಿಗೆ ಎಂದು ಪ್ರಖ್ಯಾತವಾಯಿತು. ಅಂತಹ ಮಹಾಪುರುಷರ ಪ್ರವಚನ ಇಂದಿನ ಯುವ ಪೀಳಿಗೆಗೆ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮ ಅಣ್ಣಿಗೇರಿಯಲ್ಲಿ 8 ದಿನಗಳ ಕಾಲ ಜೀವನ ಚರಿತ್ರೆ ಕುರಿತು ಆಧ್ಯಾತ್ಮಿಕ ಪ್ರವಚನ ನೀಡಿದ ಡಾ.ಎ. ಸಿ. ವಾಲಿ ಮಹಾರಾಜರಿಗೆ ಕೃತಜ್ಞತೆ ತಿಳಿಸಿ ಮತ್ತು ನಿರಂತರ ಅನ್ನ ದಾಸೋಹ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಲಿಂಗರಾಜ ಅಂಗಡಿ, ವಿಜಯ್ ಗಂಗ ಹರ್ತಿಮಠ, ಸಾವಿತ್ರಿ ನವಲಗುಂದ, ಕುಮಾರಿ ಕಾವೇರಿ ಕರಿಗಾರ್, ಸಂಗೀತ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಜಯಲಕ್ಷ್ಮಿ ಜಕರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬಾ ಜಾನ್ ಮುಲ್ಲಾನ್ವರ್, ಈಶ್ವರಪ್ಪ ಉಳ್ಳಾಗಡ್ಡಿ, ಶಿವಯೋಗಿ ಸುರುಕೋಡ್, ವಿರೇಶ್ ಕುಬಸದ, ಅಶೋಕ್ ಕುರಿ ಇನ್ನು ಹಲವು ಗಣ್ಯರು ಉಪಸ್ಥಿತರಿದ್ದರು.