ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಗೌರವ

ಬೀದರ:ಜು.31:ಧರ್ಮಗ್ರಂಥದ ಗೌರವ ಎಂದರೆ ಅದು ಧರ್ಮ ಮತ್ತು ಸಮಾಜಕ್ಕೆ ಮಾಡಿದ ನಿಜವಾದ ಗೌರವಾದರವಾಗಿದೆ. ಎಂದು ಬೇಮಳಖೇಡ ಹಿರೇಮಠ ಸಂಸ್ಥಾನ ಪಟ್ಟಾಧ್ಯಕ್ಷರಾದ ಶ್ರೀ ಷ.ಬ್ರ. ಡಾ|| ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ನಗರದ ನೌಬಾದಿನಲ್ಲಿ ಶ್ರಾವಣ ಮಾಸ ಪ್ರವಚನದ ಅಂಗವಾಗಿ ಏರ್ಪಡಿಸಿದ್ದ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಗೌರವ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಧರ್ಮಕ್ಕೆ ತನ್ನದೇ ಆದ ತತ್ವ ಸಿದ್ಧಾಂತ ಸಂಸ್ಕøತಿ ಪರಂಪರೆ ಮತ್ತು ಧರ್ಮಾಚರಣೆಗಳು ಇರುವ ಹಾಗೆ ಇವುಗಳನ್ನೆಲ್ಲ ನಿರ್ದೇಶಿಸುವ ಮಾರ್ಗದರ್ಶನ ಮಾಡುವ ಮತ್ತು ನಿಯಂತ್ರಿಸುವ ಆಚಾರ ಸಂಹಿತೆಗಳಿರುತ್ತವೆ. ಅವುಗಳಿಗೆ ಧರ್ಮ ಗ್ರಂಥಗಳೆಂದು ಕರೆಯಲ್ಪಡುತ್ತದೆ. ಇವು ಭಾರತದ ಸಂವಿಧಾನ ಆಯಾ ಧರ್ಮಗಳ ಮನ್ನಣೆ ಹೊಂದಿರುತ್ತವೆ. ಅಂತಹ ಗ್ರಂಥಗಳ ಗೌರವ. ಮೆರವಣಿಗಳೆಂದರೆ ಆಯಾ ಧರ್ಮಗಳನ್ನು ಗೌರವಿಸಿದಂತಾಗುತ್ತದೆ.

ಇಂದು ಇಲ್ಲಿ ವೀರಶೈವ ಧರ್ಮಗ್ರಂಥವಾದ ಶ್ರೀ ಸಿದ್ಧಾಂತ ಶಿಖಾಮಣಿಯನ್ನು ಮೆರವಣಿಯ ಮೂಲಕ ಗೌರವಿಸಿರುವುದು ಆ ಧರ್ಮದ ಗೌರವ ಮತ್ತು ಮುನ್ನಣೆಯನ್ನು ಎತ್ತಿಹಿಡಿದಂತಾಗಿದೆ. ನೌಬಾದಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಶಿವ ದರ್ಶನ ಪ್ರವಚನ ಕಾರ್ಯಕ್ರಮದ ನಿಮಿತ್ತವಾಗಿ ನೌಬಾದಿನ ಶ್ರೀ ಬಸವೇಶ್ವರ ವೃತ್ತದಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವರೆಗೆ ಶ್ರೀ ಸಿದ್ಧಾಂತ ಶಿಖಾಮಣಿವರೆಗೆ ಗ್ರಂಥದ ಮೆರವಣಿಗೆಯನ್ನು ಮಾಡಿರುವುದು ಮಾದರಿಯಾದ, ಶ್ಲಾಘನೀಯ ಕಾರ್ಯವಾಗಿದೆ ಎಂದು ಶ್ರೀಗಳು ಹೇಳಿದರು.

ಇದಕ್ಕೂ ಮುನ್ನ ನೌಬಾದಿನ ವೃತ್ತದ ಶ್ರೀ ಬಸವೇಶ್ವರ ಮೂರ್ತಿಗೆ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರಿಂದ ಗೌರವ ಮಾಲಾರ್ಪಣೆಯನ್ನು ಮಾಡಲಾಯಿತು. ನಗರ ಸಭೆ ಸದಸ್ಯರಾದ ಶ್ರೀಮತಿ ಮಹಾದೇವಿ ಬಸವರಾಜ ಹುಮನಾಬಾದೆ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ತಲೆಮೇಲೆ ಹೊತ್ತುಕೊಂಡಿದ್ದರು.

ಮಹಾದಪ್ಪಾ ಭಂಗೊರೆ, ವಿಶ್ವನಾಥಪ್ಪ ಹುಮನಾಬಾದೆ, ಕಂಟೆಪ್ಪ ಭಂಗೂರೆ, ಸಂಗಮೇಶ ಹುಮನಾಬಾದೆ, ಚಂದ್ರಪ್ಪ ಭಂಗೂರೆ, ಮಹಾಂತೇಶ ಡೊಂಗರಗಿ, ವೀರೇಶ ಸ್ವಾಮಿ, ಬಸವರಾಜ ಭಂಗೂರೆ ಮುಂತಾದ ಗಣ್ಯರು ಮಹಿಳೆಯರು ಮರೆವಣಿಗೆಯಲ್ಲಿ ಪಾಲ್ಗೊಂಡಿದ್ದರು.