ಶ್ರೀ ಸಿದ್ದಲಿಂಗಮಹಾಸ್ವಾಮಿಗಳಿಗೆ ಅಭಿನಂದನಾ ಕಾರ್ಯಕ್ರಮ

ಹುಣಸೂರು: ಆ.03:- ಯಾವ ಆದಾಯದ ಮೂಲವೂ ಇಲ್ಲದೆ, ಆಸ್ಥಿಯೂ ಇಲ್ಲದ ಈ ಮಠದಲ್ಲಿ ಶ್ರೀ ನಟರಾಜ ಸ್ವಾಮೀಜಿಗಳು ಭಕ್ತರನ್ನೇ ಈ ಮಠದ ಶಕ್ತಿಯಾಗಿ ಮಾಡಿಕೊಂಡು ಕ್ರಿಯಾಶೀಲರಾಗಿ ಈ ಮಠವನ್ನು ಮುನ್ನಡೆಸುವಲ್ಲಿ ಯಸಸ್ವಿಯಾಗಿದ್ದಾರೆ ಎಂದು ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ದಲಿಂಗಮಹಾಸ್ವಾಮಿ ತಿಳಿಸಿದರು.
ಅವರು ಗಾವಡಗೆರೆ ಶೀ ಗುರುಲಿಂಗ ಜಂಗಮದೇವರ ಮಠದಲ್ಲಿ ನಡೆದ ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ದಲಿಂಗಮಹಾಸ್ವಾಮಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗಟದಿಂದ ಮಠ ಬೆಳೆದಿದೆ, ಆದರೆ ಮಠ ದಿಂದ ಗಟ ಬೆಳೆಯಲಿಲ್ಲಾ ಆದರೆ ಈ ಮಠಕ್ಕೆ ಭಕ್ತರೇ ಜೀವಾಳ ಮಠದಲ್ಲಿ ಏನೂ ಇಲ್ಲ ಎಂದುಕೊಂಡು ಎಲ್ಲವನ್ನೂ ಮಾಡಿಕೊಂಡಿದ್ದಾರೆ ನಮ್ಮ ಆಯಸ್ಸು ಕಡಿಮೆ ಆದರೆ ನಮ್ಮ ಜೀವಿತಾವಧಿಯಲ್ಲಿ ಮಾಡುವ ಒಳ್ಳೆಯ ಕೆಲಸದಲ್ಲಿ ಸಾರ್ಥಕತೆ ಕಾಣಬಹುದು ಎಂದರು.
ಗಾವಡಗೆರೆ ನಟರಾಜ ಸ್ವಾಮೀಜಿಗಳು ಮಾತನಾಡಿದರು, ಈ ಸಂಧರ್ಭದಲ್ಲಿ ಶಾಸಕ ಹೆಚ್.ಪಿ ಮಂಜುನಾಥ್, ಪಿರಿಯಾಪಟ್ಟಣ ತಾಲೂಕು ಶಾಸಕ ಮಹದೇವ, ಕಂಚುಗಲ್ಲು ಬಂಡೆ ಮಠದ ಬಸವಲಿಂಗ ಮಹಾಸ್ವಾಮೀಜಿ, ಗುಬ್ಬಿ ಮಠದ ಚಂದ್ರಶೇಖರ್ ಸ್ವಾಮೀಜಿ, ನಂಜುಂಡ ಸ್ವಾಮೀಜಿ, ಚಿತ್ರದುರ್ಗದ ಚನ್ನಬಸವ ಸ್ವಾಮೀಜಿ, ವೀರಾಜಪಟೆಯ ಮಲ್ಲಿಕಾರ್ಜುನ ಸ್ವಾಮೀಜಿ, ಕೊಡಗು ಮಠದ ಮಹಾಂತ ಸ್ವಾಮೀಜಿ, ತಂಬಾಕು ಮಂಡಳಿಯ ಉಪಾದ್ಯಕ್ಷ ಬವರಾಜು ಸೇರಿದಂತೆ ಸುಮಾರು 50 ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.