ಶ್ರೀ ಸಿದ್ದಯ್ಯ ಹವಲ್ದಾರ ಸರಕಾರಿ ಶಾಲೆಗೆ ಶೇ ೯೨,೬೨ ಎಸ್‌ಎಸ್‌ಎಲ್‌ಸಿ ಫಲಿತಾಂಶ

ಅರಕೇರಾ,ಮೇ.೦೯- ೨೦೨೨-೨೦೨೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಳೆದ ಮಾರ್ಚ೩೧ರಿಂದ ಏಪ್ರೀಲ್ ೧೫ರವರಗೆ ನಡೆದಿತ್ತು ಇಂದು ಫಲಿತಾಂಶ ಪ್ರಕಟಗೊಂಡಿದ್ದು ಅರಕೇರಾ ಪಟ್ಟಣದಲ್ಲಿನ ಶ್ರೀ ಸಿದ್ದಯ್ಯ ಹವಲ್ದಾರ ಸರಕಾರಿ ಬಾಲಕರ ಪ್ರೌಢಶಾಲೆಗೆ ೯೨.೬೨ಶೇಕಡಾ ಫಲಿತಾಂಶ ಬಂದಿದೆ ಎಂದು ಮುಖ್ಯೋಪಾಧ್ಯಾಯರಾದ ಜಗಧೀಶಪ್ಪ ಬಿ.ಗಣೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು ೮೨ ತೇರ್ಗಡೆಯಾದ ವಿದ್ಯಾರ್ಥಿಗಳು ೭೬ ಅನುರ್ತ್ತಿಣರಾದ ವಿದ್ಯಾರ್ಥಿಗಳು ೬ಜನ. ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಪ್ರಭುದೇವ ತಂದೆ ಜಗಧೀಶನಾಗೋಲಿ ೬೨೫ಕ್ಕೆ ೫೭೭ ಅಂಕಪಡೆದು ಶೇ೯೨.೩೨ ಫಲಿತಾಂಶ ಪಡೆದುಕೊಂಡಿದ್ದಾನೆ,
ಉನ್ನತಶ್ರೇಣೆಯಲ್ಲಿ ೪ಜನ ವಿದ್ಯಾರ್ಥಿಗಳು ಪ್ರಥಮಶ್ರೇಣೆಯಲ್ಲಿ ೫೪ಜನ ವಿದ್ಯಾರ್ಥಿಗಳು ದ್ವೀತಿಯ ಶ್ರೇಣೆಯಲ್ಲಿ೧೬ ಜನ ಪಾಸಾದವರು ೨ ಒಟ್ಟು ೭೬ ಜನ ವಿದ್ಯಾರ್ಥಿಗಳು.
ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಪ್ರಭುದೇವ ತಂದೆ ಜಗಧೀಶನಾಗೋಲಿ ೬೨೫ಕ್ಕೆ ೫೭೭ ಅಂಕಪಡೆದು ಶೇ೯೨.೩೨ ಫಲಿತಾಂಶ ಪಡೆದುಕೊಂಡಿದ್ದಾನೆ ದ್ವೀತಿಯ ಶಿವಶಂಕರ ತಂದೆ ಗಂಗಪ್ಪ ೬೨೫ಕ್ಕೆ ೫೫೫ ಅಂಕಪಡೆದು ಶೇ೮೮ ತೃತಿಯಸ್ಥಾನ ಮಹಾಂತೇಶ ತಂದೆ ಹುಲಿಗೆಪ್ಪ ೬೨೫ಕ್ಕೆ ೫೫೫ ಅಂಕಪಡೆದುಶೇ.೮೮ ಪಡೆದಿರುತ್ತಾನೆ.
ವಿದ್ಯಾರ್ಥಿಗಳ ಸಾಧನೆಗೆ : ಉತ್ತಮ ಅಂಕಪಡೆದು ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿತಂದುಕೊಟ್ಟಿರುವ ವಿದ್ಯಾರ್ಥಿಗಳಿಗೆ ಎಸ್‌ಡಿಎಂಸಿ ಅಧ್ಯಕ್ಷರಾದ ನಾಗರಾಜನಾಯಕ ಕರ್ನಾಳ ಸರ್ವಸದಸ್ಯರುಗಳು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕವೃಂದವರು ಗ್ರಾಮಸ್ಥರು ಅಭಿನಂದಿಸಿದ್ದಾರೆ.