ಶ್ರೀ ಸಾಯಿ ಸಚ್ಛರಿತ್ರೆಯ ಮಂಗಳ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಜು3: ಪಟ್ಟಣದ ಶ್ರೀ ಸಾಯಿನಗರದ ಶ್ರೀ ಸಾಯಿಮಂದಿರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಸಾಯಿ ಸಚ್ಛರಿತ್ರೆಯ ಪಾರಾಯಣ ಸಮಾರೋಪ, ಕಾಕಡಾರತಿ, ಮಹಾರುದ್ರಾಭೀಷೇಕ, ಅಲಂಕಾರ ಪೂಜೆ, ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಪಾಲಿಕೆ ಉತ್ಸವ ಭಜನೆ, ಮಹಾಮಂಗಳಾರತಿ ಇಂದು ಜರುಗುವುದು. ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮ ಮಂಗಳವಾಗುವುದು ಎಂದು ಶ್ರೀ ಸಾಯಿ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುವರು.