ಶ್ರೀ ಸಾಯಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ

ಧಾರವಾಡ ನ 2 : ಇಲ್ಲಿನ ಶ್ರೀ ಸಾಯಿ ಎಜ್ಯುಕೇಶನಲ್ ಟ್ರಸ್ಟ್‍ನ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಹೊಂಬೆಳಕು ಫೌಂಡೇಶನ್, ಸಂಕಲ್ಪ ಯುವ ವೇದಿಕೆ ಮತ್ತು ರಾಷ್ಟ್ರೋತ್ಥಾನ ರಕ್ತ ಕೇಂದ್ರ ಸಹಯೋಗದಲ್ಲಿ 65 ನೇ ರಾಜ್ಯೋತ್ಸವ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿದ್ದ ಮೇಜರ ಮಂಜು ಗುಪ್ತಾ ಅವರು, ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ, ರಕ್ತದಾನ ಮಹಾದಾನ. ರಕ್ತದಾನಕ್ಕಿಂತ ದೊಡ್ಡ ದಾನ ಯಾವುದೂ ಇಲ್ಲ. ರಕ್ತದಾನವು ಒಂದು ರೀತಿಯ ಸಮಾಜ ಸೇವೆ ಎಂದರು. ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ರೂಪಿಸಬಹುದು, ಪ್ರಾಮಾಣಿಕತೆ ಹಾಗೂ ಸ್ಥಿರತೆಯಿಂದ ಇರುವ ಜೊತೆಗೆ ಆರೋಗ್ಯ ಕಾಳಜಿಯು ಕೂಡಾ ತುಂಬಾ ಮುಖ್ಯ ಎಂದು ಗುಪ್ತಾ ಹೇಳಿದರು.
ಇನ್ನೋರ್ವ ಅಥಿತಿ ಭಾರತ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್ ಅರುಣ ಜೋಷಿ, ಎಲ್ಲರೂ ರಕ್ತದಾನವನ್ನು ಮಾಡಬೇಕು ಎಂದು ನುಡಿದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ.ವೀಣಾ ಬಿರಾದಾರ, ಎಲ್ಲಾ ಜಾತಿ, ಕುಲ, ವರ್ಣ, ಧರ್ಮವನ್ನು ಮೀರಿದ್ದು ರಕ್ತದಾನ. ಈ ದಾನ ಒಂದು ಸಮಾಜಮುಖಿ ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿಯಾಗಲಿ ಎಂದು ಆಶಿಸಿದರು.
ಪ್ರಾಚಾರ್ಯ ಪೆÇ್ರ. ನಾಗರಾಜ ಶಿರೂರ ಪರಿಚಯಿಸಿದರು. ಪೆÇ್ರ.ಬಿ.ವಿ.ಮೋರಂಕರ್ ಸ್ವಾಗತಿಸಿದರು. ಪೆÇ್ರ.ಮೌನೇಶ್ವರ ನಿರೂಪಿಸಿದರು. ಡಾ.ಎಸ್.ಬಿ.ಗಾಡಿ, ಪೆÇ್ರ.ಎಸ್.ಎಮ್. ತಾರಿಹಾಳ, ಪೆÇ್ರ.ಸಾವಿತ್ರಿ ಪೆÇ್ರ.ಶಿವಾನಂದ ಪಾಟೀಲ, ಕರೆಪ್ಪ ಮೇಟಿ, ಗೀತಾ ಬಡಿಗೇರ, ವಿಜಯ ಹರಿಜನ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.