ಸಂಡೂರು: ಜು: 4 ಹರ ಮುನಿದರೆ ಗುರು ಕಾಯುವನು ಎನ್ನುವ ನುಡಿಯಂತೆ ಇಂದು ಗುರು ಶ್ರೀ ಸಾಯಿಬಾಬಾ ಅವರು ಭಕ್ತಿಯಿಂದ ಪ್ರಾರ್ಥಿಸಿದ ಭಕ್ತರಿಗೆ ಇಷ್ಟಾರ್ಥಗಳನ್ನು ಕರುಣಿಸಿದವರು ಇಂದು ಪ್ರತಿಯೊಬ್ಬರೂ ಸಹ ಗುರುವಿನ ಅಶೀರ್ವಾದ ಪಡೆಯಬೇಕು ಎಂದು ಶ್ರೀ ಸಾಯಿಬಾಬಾ ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಅವರು ತಿಳಿಸಿದರು.
ಇಂದು ಪಟ್ಟಣದ 13ನೇ ವಾರ್ಡನ ಹೊಸಬಾವಿ ಓಣಿಯಲ್ಲಿಯ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ ಮಾತನಾಡಿ ಕಳೆದ ಒಂದು ವಾರದಿಂದಲೂ ಸಹ ಷಣ್ಮುಖಸ್ವಾಮಿ ಮತ್ತು ಸಂಗಡಿಗರು, ಬಿಕೆಜಿ ಕಂಪನಿಯ ಸಿಬ್ಬಂದಿಗಳು, ಯೋಗ ಪಟುಗಳು ಸೇರಿ ಇಡೀ ದೇವಸ್ಥಾನದ ಅವರಣವನ್ನು ಅಲಂಕಾರ ಮಾಡಿ ಇಂದು ಬೆಳಗಿನಿಂದಲೇ ಭಕ್ತರಿಗೆ ಪ್ರಸಾದ, ದಾಸೋಹ ಸೇವೆಯನ್ನು ಮಾಡುವ ಮೂಲಕ ಬಾಬಾರ ಸೇವೆಯನ್ನು ಮಾಡುತ್ತಿದ್ದು ಇದು ಭಕ್ತಿಯ ಮಾರ್ಗವಾಗಿದೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಸೇವೆಯನ್ನು ಮಾಡುವ ಮೂಲಕ ಗುರುವಿನ ಅಶೀರ್ವಾದ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿ ಬೆಳಿಗ್ಗೆ 5 ಗಂಟೆಗೆ ಕಾಕಡ ಅರತಿಯನ್ನು ಮಾಡುವ ಮೂಲಕ ಶ್ರೀ ಗುರು ಸಾಯಿಬಾಬಾರ ಸೇವೆಯನ್ನು ಪ್ರಾರಂಭಿಸಿದ್ದು 6 ಗಂಟೆಗೆ ಭಕ್ತರ ಸಮೂಹದೊಂದಿಗೆ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿಸಿದ್ದು ನೂರಾರು ಭಕ್ತರು ಭಾಗವಹಿಸಿದ್ದರು, ಸಮಯ ಕಳೆದಂತೆ ಭಕ್ತರ ಸಂಖ್ಯೆ ಸಾವಿರಾರು ಜನರ ಸೇರಿದರು, ಅವರ ಸಮ್ಮುಖದಲ್ಲಿ 7 ಗಂಟೆಗೆ ವಸ್ತ್ರ ಮತ್ತು ಪುಷ್ಪ ಅಲಂಕಾರ ವನ್ನು ಮಾಡಿ 7.30 ಕ್ಕೆ ಮಹಾ ಮಂಗಳಾರತಿಯನ್ನು ಮಾಡಿ ಭಕ್ತರಿಗೆ ವಿಶೇಷವಾಗಿ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು. ಬೆಳಿಗ್ಗೆ 8 ಗಂಟೆಯಿಂದ ಹೋಮ ಕಾರ್ಯಕ್ರಮ ಪ್ರಾರಂಭಿಸಿದ್ದು, ವಿಶೇಷವಾಗಿ ನವಗ್ರಹಗಳ ಪೂಜೆಯನ್ನು ಸಲ್ಲಿಸಲಾಯಿತು. ಅರ್ಚಕರ ಸಂಘದ ಅಧ್ಯಕ್ಷರಾದ ಔದಂಭರ್ ಭಟ್ ಅವರ ನೇತೃತ್ವದಲ್ಲಿ 9 ಗಂಟೆಗೆ ಶ್ರೀ ಸತ್ಯನಾರಾಯಣ ಸ್ವಾಮಿಯ ವಿಶೇಷ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ಪಟ್ಟಣದ ಎಲ್ಲಾ ಭಕ್ತರು ಭಾಗವಹಿಸಿ ಶಾಂತಿಯಿಂದ ಪೂಜೆಯಲ್ಲಿ ಪಾಲ್ಗೊಂಡರು. ಸತ್ಯನಾರಾಯಣ ಸ್ವಾಮಿಯ ಪೂಜೆಯ ನಂತರ 12 ಗಂಟೆಗೆ ಮಧ್ಯಾಹ್ನದ ಅರತಿ ಕಾರ್ಯಕ್ರಮ ನಡೆಯಿತು, 1 ಗಂಟೆಗೆ ಪಟ್ಟಣದ ಸಾವಿರಾರು ಭಕ್ತರಿಗೆ ವಿಶೇಷವಾಗಿ 6ಕ್ಕೂ ಹೆಚ್ಚು ಕೇಂದ್ರಗಳನ್ನು ತೆರೆದು ಸಾಮೂಹಿಕ ಪ್ರಸಾದ , ಅನ್ನ ಸಂತರ್ಪಣೆ ನಡೆಯಿತು, ಈ ಕಾರ್ಯಕ್ರಮ ಸಂಜೆ 6 ಗಂಟೆಯವರೆಗೂ ನಡೆಯಿಉತ, ಸಂಜೆ 6.30ಕ್ಕೆ ಧೂಪಾರತಿ ಕಾರ್ಯಕ್ರಮ ನಡೆಯಿತು, 7. ಗಂಟೆಗೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಿತು, ರಾತ್ರಿ 9.30ಕ್ಕೆ ರಾತ್ರಿಯ ಅರತಿ( ಶೇಜಾರತಿ) ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣದ ಸಾವಿರಾರು ಮಹಿಳೆಯರು, ಪುರಷರು, ಭಕ್ತರ ಸಮೂಹ ಬಹು ಶಾಂತಿಯಿಂದ ಪಾಲಗೊಂಡು ಗುರು ಸಾಯಿಬಾಬಾರ ಪ್ರಾರ್ಥನೆ, ಸೇವೆ ಸಲ್ಲಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಎಲ್ಲಾ ಕಾರ್ಯಕ್ರಮಗಳನ್ನು ಷಣ್ಮುಖ. ಸಂಗಡಿಗರು, ಬಿಕೆಜಿ ಕಂಪನಿಯ ಸಿಬ್ಬಂದಿಗಳು, ಯೋಗಬಳಗದ ಯುವಕರ ತಂಡ ಎಲ್ಲಾ ರೀತಿಯ ಸೇವಾ ಕಾರ್ಯಕ್ರಮಗಳನ್ನು ಶಾಂತಿಯಿಂದ ನಡೆಸಿಕೊಟ್ಟಿದ್ದು ಬಹು ವಿಶೇಷವಾಗಿತ್ತು, ಯೋವುದೇ ರೀತಿಯ ಗದ್ದಲ, ಗಲಾಟೆ ಇಲ್ಲದೆ ಸಾಮೂಹಿಕ ಭಜೆನಯ ಮೂಲಕವೇ ಈ ಸೇವೆಗಳನ್ನು ಸಲ್ಲಿಸಿದರು.
One attachment • Scanned by Gmail