ಶ್ರೀ ಸಾಯಿಬಾಬಾರವರ ಜಯಂತಿ 19ನೇ ವಾರ್ಷಿಕೋತ್ಸವ

ತಾಳಿಕೋಟೆ:ಮಾ.28: ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ವತಿಯಿಂದ ಶ್ರೀ ಶಿರಡಿ ಸಾಯಿಬಾಬಾರವರ ಜಯಂತಿ ಉತ್ಸವ ಹಾಗೂ 19ನೇ ವಾರ್ಷಿಕೋತ್ಸವವು ಇದೇ ದಿ. 30 ರಂದು ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ವಿಜೃಂಬಣೆಯಿಂದ ಜರುಗಲಿದೆ.

ಅಂದು ಬೆಳಿಗ್ಗೆ 7-30 ಗಂಟೆಗೆ ಶ್ರೀ ನಿಮಿಷಾಂಬಾದೇವಿ ಮಂದಿರದಿಂದ ವಾಸವಿ ಕಲ್ಯಾಣ ಮಂಟಪದವರೆಗೆ ಫಲ್ಲಕ್ಕಿ ಉತ್ಸವ ಜರುಗುವದು. ನಂತರ 9-15ಕ್ಕೆ ಪ್ರಾರ್ಥನೆ, 9-30ಕ್ಕೆ ಶ್ರೀಸಾಯಿಬಾಬಾರವರ ಮಹಾಪೂಜೆ ಹಾಗೂ ಪಂಚಾಮೃತಾಭಿಷೇಕ, 10-30ಕ್ಕೆ ಶ್ರೀ ಸಾಯಿಬಾಬಾರವರ ತೋಟ್ಟಿಲು ಸೇವೆ, 11-15ಕ್ಕೆ ಶ್ರೀಸಾಯಿಬಾಬಾರವರ ಭಜನಾ ಸೇವೆ, 11-45ಕ್ಕೆ ಶ್ರೀಸಾಯಿ ಭಕ್ತರಿಂದ ಸಂಗೀತ ಸೇವೆ, 12-30ಕ್ಕೆ ಶ್ರೀ ವೇ.ಸಂತೋಷಬಟ್ ಜೋಶಿ ಅವರಿಂದ ಸಾಯಿ ಕಥಾಮೃತ, 1-30ಕ್ಕೆ ಮಂಗಳಾರತಿ ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾಪ್ರಸಾದ ಜರುಗುವದು.

ಕಾರಣ ಭಕ್ತಾಧಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿ ಶ್ರೀ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ಅಧ್ಯಕ್ಷ ಬಸವರಾಜ ಮದರಕಲ್ಲ, ಉಪಾಧ್ಯಕ್ಷ ಎಂ.ಜಿ.ಪಾಟೀಲ(ಗುಂಡಕನಾಳ) ಅವರು ಪ್ರಕಟನೆ ಮೂಲಕ ತಿಳಿಸಿದ್ದಾರೆ.