ಶ್ರೀ ಸಾಧು ಶಿವಲಿಂಗೇಶ್ವರ ಪುರಾಣ ಆರಂಭ

ಕಲಬುರಗಿ:ಏ.23: ನಗರದ ಕೋಟನೂರ (ಡಿ) ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಸಾಧು ಶಿವಲಿಂಗೇಶ್ವರವರ 10ನೇ ಜಾತ್ರಾ ಮಹೋತ್ಸವದಂಗವಾಗಿ ಶ್ರೀ ಸಾಧು ಶಿವಲಿಂಗೇಶ್ವರರ ಪುರಾಣ ಕಾರ್ಯಕ್ರಮ ಏ.21 ರಿಂದ ಮೇ.1 ರವರೆಗೆ ಸಂಜೆ 7.30 ಕ್ಕೆ ಶ್ರೀ ಸಾಧು ಶಿವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಯೋಗರಾಜ ಖಾನಾಪುರ ಅವರು ಪುರಾಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಗಮೇಶ್ ಪಾಟೀಲ್ ಧಂಗಾಪುರ, ಯೋಗರಾಜ ಕಣ್ಣಿ ಅವರಿಂದ ಸಂಗೀತ ಸೇವೆ ನಡೆಯಲಿದೆ. ಚಿನ್ಮಯಗಿರಿ ಮಹಾಂತೇಶ್ವರ ಕ್ಷೇತ್ರದ ಶ್ರೀ ಷ.ಬ್ರ.ಸಿದ್ದರಾಮ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು. ಕಡಗಂಚಿ ಕಟ್ಟಿಮಠದ ವೀರ ತಪಸ್ವಿ ಶ್ರೀ.ಷ.ಬ್ರ. ವೀರಭದ್ರ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ದಂಡಗುಂಡ ಬ್ರಹನ್ಮಠದ ಶ್ರೀ. ಷ.ಬ್ರ. ಸಂಗನಬಸವ ಶಿವಚಾರ್ಯರು, ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ವಿರಕ್ತಮಠದ ಶ್ರೀ ಮನಿ. ಪ್ರ.ಅಭಿನವ ಶಿವಲಿಂಗ ಮಹಾಸ್ವಾಮಿಗಳು , ನರೋಣಾ ಹೊಸಮಠದ ಶ್ರೀ ಪರಮ ಪೂಜ್ಯ ಶ್ರೀ ಚನ್ನಮಲ್ಲ ಸ್ವಾಮಿಗಳು, ಮಾದನಹಿಪ್ಪರಗಾ ಬ್ರಹನ್ಮಠದ ಶ್ರೀ.ಷ.ಬ್ರ. ಶಾಂತವೀರ ಶಿವಚಾರ್ಯರು, ಅಕ್ಕಲಕೋಟ ವಿರಕ್ತಮಠದ ಶ್ರೀ.ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು, ನೀಲೂರ ಶ್ರೀ ಬಂಗಾರ ಜಡೇ ನೀಲಕಂಠೇಶ್ವರ ಹಾಗೂ ಶ್ರೀ ಗೋಣಿ ರುದ್ರೇಶ್ವರ ಹಿರೇಮಠ ಹಾಗೂ ಅಕ್ಕಲಕೋಟ ವಿರಕ್ತಮಠದ ಶ್ರೀ. ಮ.ನಿ.ಪ್ರ.ಬಸವಲಿಂಗ ಮಹಾಸ್ವಾಮಿಗಳು ನೇತೃತ್ವವಹಿಸುವರು.
ಶ್ರೀ ಶಿವಲಿಂಗೇಶ್ವರ ಪುರಾಣ ಕಾರ್ಯಕ್ರಮಕ್ಕೆ ಭಕ್ತಾಧಿಕಾಗಳು ಪಾಲ್ಗೊಂಡು ಪುನೀತರಾಗಬೇಕು ಹಾಗೂ ಪ್ರತಿ ದಿನ ಪುರಾಣ ನಂತರ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರರಾದ ಬಸವಂತರಾಯ ಪಾಟೀಲ್, ಸದಸ್ಯರಾದ ವಿದ್ಯಾಸಾಗರ ಪಾಟೀಲ್ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.