ಶ್ರೀ ಸವಿತಾ ಮಹರ್ಷಿ ಗುರುಗಳ ಜಯಂತಿ ನಿಮಿತ್ಯ ರಾಜ್ಯ ಮಟ್ಟದ ಕ್ರಿಕೇಟ್ ಟೂರ್ನಾಮೆಂಟ್

ಬೀದರ :ಫೆ.16:ನಗರದ ಜಿಲ್ಲಾ ನೆಹರು ಕ್ರಿಡಾಂಗಣದಲ್ಲಿ ನಡೆದ ಶ್ರೀ ಶ್ರೀ ಶ್ರೀ ಸವಿತಾ ಮಹರ್ಷಿ ಗುರುಗಳ ಜಯಂತ್ಯೋತ್ಸವದ ನಿಮಿತ್ಯ ರಾಜ್ಯ ಮಟ್ಟದ 6ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೇಟ್ ಟೂರ್ನಾಮೆಂಟ್ ಆಯೋಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಕ್ರಿಕೇಟ್ ಪಂದ್ಯಾವಳಿ ಪ್ರಾರಂಭಿಸಲಾಯಿತು ಈ ಕಾರ್ಯಕ್ರಮದ ಉದ್ಘಾಟಕರಾಗಿ ಜನತಾದಳ ಪಕ್ಷದ ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯರಾದ ನವಾಜ್ ಖಾನ್ ರವರು ರಿಬ್ಬನ್ ಕತ್ತರಿಸುವುದರ ಮುಖಾಂತರ ಪಂದಕ್ಕೆ ಚಾಲನೆ ನೀಡಿದರು.
ಮುಖ್ಯ ಅಥಿತಿಗಳಾಗಿ ಶ್ರೀ ಅಭಿಮಾನ ಕಾಂಬಳೆ, ವಿಜಯಕುಮಾರ ಸೋನಾರೆ, ಶಾಮರಾವ ಮೋರ್ಗಿಕರ್, ನಾರಾಯಣರಾವ ಗೋಂದೆಗಾಂವಕರ, ಉಮೇಶ ಡಿ. ಗೋಂದೆಗಾಂವಕರ, ಮಹಿಳಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲಕ್ಷಿ??ೀ ಸೇನಾ, ಶ್ರೀಮತಿ ನಿರ್ಮಲಾ ಚಲುವಾ ಹಾಗೂ ಸವಿತಾ ಮಹರ್ಷಿ ಕ್ರಿಕೇಟ್ ಕ್ಲಬ್ ಅಧ್ಯಕ್ಷರಾದ ಶಿವಕುಮಾರ ಶಾಹಪೂರೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಕಾರ್ಯದರ್ಶಿಗಳಾದ ಶಾಂತಕುಮಾರ ಮುಸ್ತಾಪೂರೆ ಅತಿಥಿಗಳಿಗೆ ಸ್ವಾಗತ ಕೋರಿದರು ಉಪಾಧ್ಯಕ್ಷರಾದ ವಿಷ್ಣುವರ್ಧನ ಆರ್. ಇವರು ವಂದನಾರ್ಪಣೆ ಸಲ್ಲಿಸಿದರು ಸುನೀಲ ಕಡ್ಡೆಯವರು ನಿರೂಪಣೆ ಮಾಡಿದರು.
ಈ ಟೂರ್ನಮೆಂಟ್‍ಗೆ 8 ತಂಡಗಳು ಆಗಮಿಸಿದ್ದು ಖರಸಗುತ್ತಿಯ ಆರ್.ಕೆ. ಕ್ಲಬ್ ತಂಡ ಪ್ರಥಮ ಮತ್ತು ಸವಿತಾ ಮಹರ್ಷಿ ತಂಡ ಬೀದರ ದ್ವಿತೀಯ ಸ್ಥಾನ ಪಡೆದಿವೆ.