ಶ್ರೀ ಸಮಗಾರ ಹರಳಯ್ಯ ಜಯಂತಿ- ಕಾಯಕ ಶರಣರ ಜಯಂತಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೧೨: ಜಿಲ್ಲಾ ಆಡಳಿತ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಸಮಗಾರ ಹರಳಯ್ಯ ಜಯಂತಿ ಮತ್ತು ಕಾಯಕ ಶರಣರ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಪ್ರೊಫೆಸರ್ ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಸಹಾಯಕ ನಿರ್ದೇಶಕ ರವಿಚಂದ್ರ, ಅಪರ ಜಿಲ್ಲಾಧಿಕಾರಿ ಫಾತಿಮಾ ಹಾಗು ದಾವಣಗೆರೆ ಜಿಲ್ಲಾ ಶ್ರೀ ಶಿವಶರಣ ಸಮಗಾರ ಹರಳಯ್ಯ ಹೋರಾಟ ಸಮಿತಿಯ  ಸುಬ್ಬಣ್ಣ ಮಾನೆ,  ಧರ್ಮರಾಜ್ ಚಂದಾವರಿ,  ನೀಲಕಂಠ ಕಬಾಡೆ,  ಜಯಣ್ಣ ಗಿಂಜಾಳೆ  ಮಂಜುನಾಥ್ ಶಿಗ್ಲಿ,  ದೀಪಕ್ ಸವಾಳಗಿ  ಚಂದ್ರಶೇಖರ ತಲಗಾವಿ,  ಗೋಪಾಲಕೃಷ್ಣ ತಲಗಾವಿ,  ರತ್ನಾಕರ್ ಉಳ್ಳಿಕಾಶಿ,  ಜಯಣ್ಣ ವತನ್  ರವಿ ಕುಮಾರ್ ಮಾನೆ, ಶ್ರೀಮತಿ ಶೋಭಾ ದೇವಮಾನೆ, ಶ್ರೀಮತಿ ರೇಣುಕಮ್ಮ ಗಿಂಜಾಳೆ ಶ್ರೀಮತಿ ರತ್ನಮ್ಮ ವತನ್, ಶ್ರೀಮತಿ ಜಯಶ್ರೀ ಸಾವಳಗಿ ಶ್ರೀ ಧನರಾಜ್ ಸಾವಳಗಿ ಹಾಗೂ  ವಿಜಯಾನಂದ ತಲಗಾವಿ ಉಪಸ್ಥಿತರಿದ್ದರು.