ಶ್ರೀ ಸದ್ಗುರು ಗಾದಿಲಿಂಗೇಶ್ವರ ಅಜ್ಜನ 3ನೇ ವರ್ಷದ ಜಾತ್ರಾಸ್ಮರಣೋತ್ಸವ, ತುಲಾಭಾರ ಸೇವೆ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.16: ಪಟ್ಟಣ ಸಮೀಪದ ಪಟ್ಟಣಸೆರಗು ಗ್ರಾಮದ ಶ್ರೀ ಗಾದಿಲಿಂಗೇಶ್ವರ ಮಠದ ಸೇವಸಮಿತಿ ವತಿಯಿಂದ ಶ್ರೀ ಪರಮಪೂಜ್ಯ ಹೊನ್ನುಸಿದ್ದೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಗುರುವಾರ ಶ್ರೀ ಸದ್ಗುರು ಗಾದಿಲಿಂಗೇಶ್ವರ 3ನೇ ವರ್ಷದ ಜಾತ್ರಾಸ್ಮರಣೋತ್ಸವ ಮತ್ತು ಭಕ್ತರಿಂದ ಹೊನ್ನುಸಿದ್ದೇಶ್ವರ ಮಹಾಸ್ವಾಮಿಗಳ ಪ್ರಥಮವಾಗಿ ಎರಡು ತುಲಾಭಾರ ಸೇವೆ ಜರುಗಿದವು.
ಶ್ರೀ ಪರಮಪೂಜ್ಯ ಹೊನ್ನುಸಿದ್ದೇಶ್ವರ ಮಹಾಸ್ವಾಮಿಗಳು ತುಲಾಭಾರ ಸೇವೆ ಸ್ವೀಕರಿಸಿ ಕಾರ್ಯಕ್ರಮ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ತಾತನವರು, ಪ್ರತಿಯೊಬ್ಬರೂ ಇತರರಿಗೆ ಪ್ರತಿ ಕ್ಷಣ ಒಳಿತನ್ನೇ ಬಯಸಬೇಕು ಅಂದಾಗ ಮಾತ್ರ ಭಗವಂತ ಅವರ ಜೀವನದಲ್ಲಿಯೂ ಒಳ್ಳೆಯದನ್ನೇ ಕರುಣಿಸುತ್ತಾನೆ ಎಂದರು.
ಮಾತಾಪಿತೃಗಳು ಹಾಗೂ ಸ್ವಾಮೀಜಿಗಳ ತುಲಾಭಾರ ಕಾರ್ಯಕ್ರಮದಿಂದ ಪುಣ್ಯಸಾಧನೆ ಲಭಿಸಲಿದೆ. ತುಲಾಭಾರವೆಂದರೆ ಎಲ್ಲವೂ ಸ್ವಾಮಿಗಳ ಮೂಲಕವಾಗಿ ಭಗವಂತನಿಗೆ ಸಮರ್ಪಿತವಾಗಿದೆ. ನಾನು ಎಂಬ ಅಹಂ ಭಾವ ದೂರವಾಗಿ ಎಲ್ಲವೂ ನಿನ್ನದೇ ಎನ್ನುವ ಭಾವ ಮೂಡುತ್ತದೆ. ಇದರಿಂದಾಗಿ ದೇವರು ಕೊಟ್ಟಿದ್ದು ದೇವರಿಗೆ ಸಲ್ಲಿತು ಎನ್ನವು ಸಂತೃಪ್ತಿ ಬರುತ್ತದೆ. ಇದು ಕೆಲವರ ಜೀವನದಲ್ಲಿ ಮಾತ್ರ ಕಂಡು ಬರುತ್ತದೆ ಎಂದು ಹೇಳಿದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಮಾತನಾಡಿದ ಅವರು ಮುಂಬರುವ ಗುಳ್ಯದ ಶ್ರೀ ಗಾದಿಲಿಂಗಪ್ಪ ತಾತನವರ ಜಾತ್ರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಗುಳ್ಯದಿಂದ ಬಸರಕೊಡು ಗ್ರಾಮಕ್ಕೆ ಕಲ್ಪಿಸುವ ಸೇತುವೆ ನಿರ್ಮಾಣ ಮಾಡುವ ಕುರಿತು ಮಾತನಾಡಿ ತಾತನವರ ಗಟ್ಟಿಯಾದ ಆಶೀರ್ವಾದ ಮಾಡಿಸುತ್ತೇನೆ ಎಂದರು.
ಪ್ರವಚನ ವಿಶ್ವರಾಧ್ಯ ಶಾಸ್ತ್ರಿಗಳು ಕಂಬಳಿ ಮಠ, ತೆಕ್ಕಲಕೋಟೆ ಇವರಿಂದ. ಸಂಗೀತ ಮುಂಡ್ರಿಗಿ ಬಸವನಗೌಡ ಕುರುಗೋಡು ಮತ್ತು ಶರಣಯ್ಯ ಶಾಸ್ತ್ರಿ ಗವಾಯಿಗಳು ಜಂಗಮಕ್ಷೇತ್ರ ಸಿದ್ದರಾಂಪುರ ಇವರಿಂದ. ತಬಲ ರಾಜ್ ಮೊಹಮದ್ ಕೇಸರಹಟ್ಟಿ ಹಾಗೂ ಯೋಗೇಶ್ ಬನಗಾರ್ ಸಂಗನಕಲ್ಲು ಇವರು ನೆರವೇರಿಸಿಕೊಟ್ಟರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮಂಜಮ್ಮ ಜೋಗತಿ ಮಾತನಾಡಿದರು.
ಎಮ್ಮಿಗನೂರು ವೆಂಕಟೇಶ್ ಮತ್ತು ಓರ್ವಯಿ ಸೋಮಣ್ಣ ಇವರಿಂದ ತುಲಾಭಾರ ಸೇವೆ ಮಾಡಿದರು.
ಪ್ರಾರಂಭದಲ್ಲಿ ಗಂಗೆಸ್ಥಳಕ್ಕೆ ಕಳಸ ಸುಮಂಗಲೇಯರೊಂದಿಗೆ ಡೊಳ್ಳು, ಭಜನೆ, ಭಜಂತ್ರಿ ಮತ್ತು ವಾದ್ಯಗಳೊಂದಿಗೆ ಮೆರವಣಿಗೆ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಮಹಾಗಣರಾದನೆ ಮತ್ತು ನೆರೆದ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಬೊಳೋಡಿಬಸವೇಶ್ವರ ಶಿವಯೋಗಿ ಸಂಸ್ಥಾನ ಬೃಹನ್ಮಠ, ಹೆಬ್ಬಾಳ, ಅಜಾತಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಪುರವರ್ಗಮಠ, ಜಂಗಮರಹೊಸಳ್ಳಿ, ಆಂಧ್ರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮಂಜಮ್ಮ ಜೋಗತಿ ,ಮರಿಯಮ್ಮನಹಳ್ಳಿ, ಶಿವಕುಮಾರ ಮಹಾಸ್ವಾಮಿಗಳು ಕಾಲಜ್ಞಾನ ಮಠ ಬೇಡರಕಾರಲಕುಂಟ ಮಸ್ಕಿ , ಸಂಗಮೇಶ್ವರ ಶರಣರು  ಸಚ್ಚಿದಾನಂದ ಆಶ್ರಮ ಸಿದ್ದಪರ್ವತ ಅಂಬಾಮಠ ಜಡೇಶ್ವರ ಶರಣರು, ಶ್ರೀ ಜ್ಞಾನ ಜ್ಯೋತಿ ಜಡೇಶ ಶಿವಲಿಂಗ ಮಂದಿರ, ಹೆಚ್.ವೀರಾಪುರ, ಮಲ್ಲಯ್ಯ ಶರಣರು ಮಲ್ಲೇಶ್ವರ ದೇವಸ್ಥಾನದ ಅರ್ಚಕರು, ಹಡ್ಲಿಗಿ, ರಮೇಶಪ್ಪ ಶರಣರು ಗಾದಿಲಿಂಗೇಶ್ವರ ಮಠ, ಸೋಮಸಮುದ್ರ, ಗಾದಿಲಿಂಗೇಶ್ವರ ಶರಣರು ಬಳ್ಳಾರಿ, ನಾಗಲಿಂಗೇಶ್ವರ ಶರಣರು ಮೆಟ್ರಿ, ನಿವೃತ್ತ ಮುಖ್ಯ ಶಿಕ್ಷಕ ಕೆ.ಗಾದಿಲಿಂಗಪ್ಪ, ಓರ್ವಯಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದಧಿಕಾರಿ ಲಕ್ಷ್ಮಣ್ ನಾಯಕ್ ಮತ್ತು ಪಟ್ಟಣಸೆರಗು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇದ್ದರು.