ಶ್ರೀ ಸತ್ಯಬೋಧರಾಯರ ಪಾದುಕಾ ಮೆರವಣಿಗೆ: ಆರಾಧನೆ

ಬಾಗಲಕೋಟೆ ಮಾ. 27 : ರವಿವಾರದಿಂದ ನವನಗರದ ಶ್ರೀ ಉತ್ತರಾಧಿ ಮಠದಲ್ಲಿ ನಡೆಯಲಿರುವ ಶ್ರೀ ಸತ್ಯಬೋಧರಾಯರ ಆರಾಧನೆಗಾಗಿ ಮೂಲ ಪಾದುಕೆಗಳನ್ನು ಭವ್ಯ ಪಲ್ಲಕ್ಕಿ ಮೆರವಣಿಗೆಯಲ್ಲಿ ಶುಕ್ರವಾರ ಸಂಜೆ ಶ್ರೀಮಠಕ್ಕೆ ತರಲಾಯಿತು.
ನವನಗರದ ಶ್ರೀ ಪ್ರಸನ್ನ ವೆಂಕಟದಾಸರ ಸನ್ನಿದಾನದ ಕಾಖಂಡಕಿ ಅವರ ನಿವಾಸದಿಂದ ಶ್ರೀಸತ್ಯಬೋಧರಾಯರ ಪಾದುಕೆಗಳನ್ನು ತರಲಾಗಿದ್ದು ಆರಾಧನೆಯ ಮೂರು ದಿನಗಳ ಕಾಲ ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಉತ್ತರಾಧಿ ಮಠದ ವ್ಯವಸ್ಥಾಪಕರಾದ ಪಂ ಭೀಮಸೇನಾಚಾರ್ಯ ಪಾಂಡುರಂಗಿ ಅವರ ನೇತೃತ್ವದಲ್ಲಿ ಪಂಡಿತರು, ಮಹಿಳಾ ಭಜನಾ ಮಂಡಳಿಗಳು, ಹಿರಿಯರು ಮೆರವಣಿಗೆಯಲ್ಲಿ ಭಾಗವಹಿಸಿ ಶ್ರೀಮಠಕ್ಕೆ ಪಾದುಕೆಗಳನ್ನು ತರಲಾಯಿತು. ಪಂ ಬಿಂದಾಚಾರ್ಯ ನಾಗಸಂಪಗಿ, ವಾದಿರಾಜಾಚಾರ್ಯ ಇಂಗಳೆ ಮತ್ತಿತರರು ಪಾಲ್ಗೊಂಡಿದ್ದರು.
ಉತ್ತರಾಧಿ ಮಠದಲ್ಲಿ ಆರಾಧನೆ ನಿಮಿತ್ಯ ವಿವಿಧ ಕಾರ್ಯಕ್ರಮಗಳು ನಡೆದಿದ್ದು ಪಂ. ಶ್ರೀಕರಾಚಾರ್ಯ ಬಿದರಳ್ಳಿ ಅವರಿಂದ ನಿತ್ಯ ಸಂಜೆ 6:30ರಿಂದ ಪ್ರವಚನ ನಡೆಯುತ್ತಿದ್ದು ದಿ.28,29,30ರಂದು ನಡೆಯುವ ಆರಾಧನೆಯಲ್ಲಿ ಕೂಡಲಿ ಅಕ್ಷೋಭ್ಯತೀರ್ಥ ಮಠದ ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳವರು ಸಾನಿಧ್ಯ ವಹಿಸಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಶಾಸ್ತ್ರಾನುವಾದ, ಪ್ರವಚನ ಮಂಗಲ, ಅಷ್ಟೋತ್ತರ ಕಾರ್ಯಕ್ರಮಗಳು ನಡೆಯಲಿದ್ದು ಸದ್ಭಕ್ತರು ಭಾಗವಹಿಸಲು ವ್ಯವಸ್ಥಾಪಕ ಪಂ ಪಾಂಡುರಂಗಿ ಅವರು ವಿನಂತಿಸಿಕೊಂಡಿದ್ದಾರೆ.