ಶ್ರೀ ಸತ್ಯಬೋಧರಾಯರ ಆರಾಧನೆ ಸಂಪನ್ನ

ಬಾಗಲಕೋಟೆ: ಏ2:ಪುರಾಣ ಮಂಗಲ, ಪಲ್ಲಕ್ಕಿ ಉತ್ಸವ, ಭವ್ಯ ರಥೋತ್ಸವದೊಂದಿಗೆ ನವನಗರದ ಉತ್ತರಾಧಿಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಶ್ರೀ ಸತ್ಯಬೋಧರಾಯರ ಆರಾಧನೆ ಮಂಗಳವಾರ ಸಂಪನ್ನಗೊಂಡಿತು.
ಕಳೆದ ದಿ.23ರಿಂದ ಶ್ರೀ ಮಠದಲ್ಲಿ ನಡೆದ ಶ್ರೀಕರಆಚಾರ್ಯ ಬಿದರಳ್ಳಿ ಅವರು ನಡೆಸಿಕೊಟ್ಟ ಪುರಾಣ ಮಂಗಲಗೊಂಡಿತು. ಈ ಸಂದರ್ಭದಲ್ಲಿ ಪಂ ಬಿ.ಎನ್.ಶ್ರೀನಿವಾಸಾಚಾರ್ಯ, ಪಂ.ಬಿಂದಾಚಾರ್ಯ ನಾಗಸಂಪಗಿ, ಅವರು ಪ್ರವಚನ ನೀಡಿ ಮಧ್ವ ಸಿದ್ದಾಂತದಲ್ಲಿ ಸತ್ಯಬೋಧರಾಯರ ಅನನ್ಯ ಕಾಣಿಕೆಯನ್ನು ಸ್ಮರಿಸಿ ಮಾತನಾಡಿದರು. ಉತ್ಸವ ನೇತೃತ್ವ ವಹಿಸಿದ್ದ ಶ್ರೀ ಮಠದ ವ್ಯವಸ್ಥಾಪಕ ಪಂ ಭೀಮಸೇನಾಚಾರ್ಯ ಪಾಂಡುರಂಗಿ ಅವರು ಮೂರು ದಿನಗಳ ಉತ್ಸವದಲ್ಲಿ ಭಕ್ತರು ತೋರಿದ ಶ್ರದ್ದಾಭಕ್ತಿಯನ್ನು ಕೊಂಡಾಡಿ ಬರಲಿರುವ ದಿನಗಳಲ್ಲಿ ಮಹಾಸಮಾರಾಧನೆಗೆ ಇದು ಸ್ಪೂರ್ತಿ ನೀಡಿದೆ ಎಂದರು.
ಭಜನಾ ಮಂಡಳಿಗಳ ಭಜನೆ, ದಾಸರ ಪದಗಳು, ಶ್ರೀಮಠದಲ್ಲಿ ಅನುರಣಿಸಿದವು. ಭವ್ಯ ರಥೋತ್ಸವವನ್ನು ಕಣ್ತುಂಬಿಕೊಂಡ ಸದ್ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿದರು. ಬಾಬು ಜಂಬಗಿ ಕಾರ್ಯಕ್ರಮ ನಿರೂಪಿಸಿದರು, ಶ್ರೀನಾಥ ಮಳಗಿ, ನರಸಿಂಹ ಆಲೂರ, ಅಶೋಕ ಹಳ್ಯಾಳ, ರಾಘು ಪುರೋಹಿತ, ಸಂಜೀವ ದೇಶಪಾಂಡೆ, ಕೃಷ್ಣ ಹೊದ್ಲೂರ, ವಿಜಯ ದೇಶಪಾಂಡೆ,ನಿವೃತ್ತ ಪೊಲೀಸ ಅಧಿಕಾರಿ ಆರ್.ಆರ್.ಕುಲಕರ್ಣಿ, ವಾದಿರಾಜ ಇಂಗಳೆ, ಗೋಪಾಲ ದೇಸಾಯಿ, ಗೋಪಾಲ ಜಂಬಗಿ.ಆರ್.ಎಸ್.ಕುಲಕರ್ಣಿ ಮತ್ತಿತರರು ನೇತೃತ್ವ ವಹಿಸಿದ್ದರು.
ಕಲಾವಿದರಾದ ಸಂತೋಷ ಗದ್ದನಕೇರಿ, ಜಯತೀರ್ಥ ತಾಸಗಾವ ಅವರು ದಾಸ ಗೀತೆ ಹಾಡಿ ಸೇವೆ ನೀಡಿದರು.