ಶ್ರೀ ಶೈಲ ಸಮುದಾಯ ಭವನ ಉದ್ಘಾಟನೆ

ಹರಿಹರ.ಜ.೭; ಶ್ರೀ ಜಗದ್ಗುರು ಪಂಚಾಚಾರ್ಯ ಧರ್ಮ ಸಂಸ್ಥೆ  ಆಶ್ರಯದಲ್ಲಿ ಸಮುದಾಯ ಭವನ ಅತಿಥಿ ಗೃಹ ವಾಣಿಜ್ಯ ಸಂಕೀರ್ಣ ಹಾಗೂ ಹೊರಾಂಗಣ ಉದ್ಯಾನವನ ಸಭಾಭವನದ ಭೂಮಿ ಪೂಜೆ ಸಮಾರಂಭವನ್ನು ಶ್ರೀ ಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸಾಮಿಗಳು ಇವರುಗಳ ಮುಂದಾಳತ್ವದಲ್ಲಿ  ಶಂಕುಸ್ಥಾಪನೆ ನಾಮಫಲಕದ ಅನಾವರಣವನ್ನು ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದರಾದ ಜಿ ಎಂ ಸಿದ್ದೇಶ್, ಮೇಯರ್ಅಜಯಕುಮಾರ್ ,ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ .ಜಿಲ್ಲಾ ವರಿಷ್ಠಾಧಿಕಾರಿ ಹನಮಂತರಾಯ . ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ .ಬಿ ಸಿ ಉಮಾಪತಿ .ತಹಸೀಲ್ದಾರ್ ಕೆ ಬಿ ರಾಮಚಂದ್ರಪ್ಪ ನಗರಸಭೆಯ ಪೌರಾಯುಕ್ತರಾದ ಉದಯ ಕುಮಾರ್ ಬಿ ತಳವಾರ .ಹಾಗೂ ಹಾಲಸ್ವಾಮಿ ಬಸರಾಜ್ ಬಸವರಾಜ ಸ್ವಾಮಿ ಆರ್ ಟಿ ಪ್ರಶಾಂತ್ ಇದ್ದರು.