ಶ್ರೀ ಶೈಲ ಜಗದ್ಗುರುಗಳ 12ನೇ ದ್ವಾದಶ ಪೀಠಾರೋಹಣ ಮಹೋತ್ಸವ

.

ಶಿವಮೊಗ್ಗ.ಸೆ.೧೩; ಶ್ರೀ ಶೈಲ ಜಗದ್ಗುರುಗಳ 12ನೇ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವದ ಪ್ರಯುಕ್ತ ವೀರಶೈವ ಕಲ್ಯಾಣ ಮಂದಿರದಲ್ಲಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.ಯಡೆಯೂರಿನಿಂದ 540ಕಿ.ಮೀ. ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಹೋಗಲು ನಿರ್ಧರಿಸಲಾಯಿತು. ದಾರಿಯುದ್ದಕ್ಕೂ ವಿವಿಧ ವೆಸನಿಗಳ ಜಾಗೃತಿಗೊಳಿಸುವ ಉದ್ದೇಶ ಹೊಂದಲಾಗಿದೆ.ಶ್ರೀಶೈಲ ಮಠಕ್ಕೆ ಆಂದ್ರ ಸರ್ಕಾರ 5 ಎಕರೆ ಜಾಗ ನೀಡಿದ್ದು, ಇಲ್ಲಿ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ವಸತಿ ಗೃಹ ನಿರ್ಮಾಣದ ಯೋಜನೆ ಹಾಕಿಕೊಂಡಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಎಸ್‌ಎಸ್. ಜ್ಯೋತಿ ಪ್ರಕಾಶ್‌ರವರು ವಸತಿ ಗೃಹ ನಿರ್ಮಾಣಕ್ಕೆ ಸಹಕಾರಿಯಾಗಿ 1 ಕೊಠಡಿ ಕಟ್ಟುವ ವೆಚ್ಚ 6 ಲಕ್ಷರೂ.ಗಳನ್ನು ನೀಡುವುದಾಗಿ ಘೋಷಿಸಿದರು.ಸಮಾಜದ ಪ್ರಮುಖರಾದ ಎನ್.ಜೆ. ರಾಜಶೇಖರ್, ಹೆಚ್.ವಿ. ಮಹೇಶ್ವರಪ್ಪ, ಮುರುಗೇಶ್, ಮಹಾಲಿಂಗಶಾಸ್ತಿ ಮತ್ತಿತರರು ಉಪಸ್ಥಿತಿರಿದ್ದರು