ಶ್ರೀ ಶೈಲೇಶ್ವರ ಶಾಲೆಯಲ್ಲಿ ಸಂಸತ್ ಚುನಾವಣೆ


ಸಂಜೆವಾಣಿ ವಾರ್ತೆ
ಸಂಡೂರು :ಜು:24: ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಇರುವ ಶ್ರೀ ಶೈಲೇಶ್ವರ ವಿದ್ಯಾಕೇಂದ್ರ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನ ನಡೆಸಲಾಯಿತು. ಕನ್ನಡ ಮಾಧ್ಯಮದ ಎಲ್ಲಾ ತರಗತಿಯ ಮಕ್ಕಳು ಅತ್ಯಂತ ಸಡಗರ ಸಂತೋಷದಿಂದ ಚುನವಣೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿದರು. ಚುನಾವಣೆಯ ನಡೆಯುವ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಷಣ್ಮುಖರಾವ್ ಜಗತಾಪ್. ಪಿ.ಆರ್.ಓ. ಆಗಿ ಟಿ.ಆರ್. ಬಸವನಗೌಡ ಎ.ಪಿ.ಆರ್. ಜಗದೀಶ, ಪಿ.ಓ -1 ತೇಜಸ್ವಿ, ಗಾಯತ್ರಿ, ದೇವೆಂದ್ರ ಆರ್.ಓ ಆಗಿ ಗೋಪಾಲ ಎ.ಆರ್.ಓ ಮಹಾಂತೇಶ ಪ್ರೋಗ್ರಾಮ್ ಅಧಿಕಾರಿ ವೀರೇಂದ್ರ ಕುಮಾರ ವೇದಮೂರ್ತಿ ಎಲ್ಲಾ ಅಧಿಕಾರಿಗಳು ಶಾಲಾ ಸಂಸತ್ ಚುನಾವಣೆಯನ್ನ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕ ಸಿಬ್ಬಂದಿಯವರು ಹಾಜರಿದ್ದು,  ಚುನಾವಣೆಯನ್ನ ಯಶಸ್ವಿಗೊಳಿಸಿದರು ಎಂದುಪಿ.ಆರ್.ಓ ಆಗಿ ಕರ್ತವ್ಯ ನಿರ್ವಹಿಸಿದ ಟಿ.ಆರ್. ಬಸವನಗೌಡರು. ಸಂಜೆವಾಣಿ ವರದಿಗಾರರ ಜೊತೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.

Attachments area