ಶ್ರೀ ಶಿವಶರಣ ಹರಳಯ್ಯನವರ ಜಯಂತಿ ಸರಳಾಚರಣೆ

ಕಲಬುರಗಿ,ಏ.27: ಹನ್ನೆರಡನೇ ಶತಮಾನದ ಸಾಮಾಜಿಕ ಕ್ರಾಂತಿಗೆ ಕಾರಣಿಕರ್ತರಾದ ಶ್ರೀ ಶಿವಶರಣ ಹರಳಯ್ಯನವರ 908ನೇ ಜಯಂತಿ ನಿಮಿತ್ಯ ಮಂಗಳವಾರ ಕಲಬುರಗಿ ನಗರದ ಗೋವಾ ಹೋಟೆಲ್ ಹತ್ತಿರದ ಸಿದ್ದಾರ್ಥ ಚೌಕ್‍ನಲ್ಲಿ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಜಯಂತ್ಯೋತ್ಸವ ಆಚರಿಸಲಾಯಿತು.

ಕಲಬುರಗಿ ಜಿಲ್ಲಾ ಶಿವಶರಣ ಹರಳಯ್ಯ ಸಂಯುಕ್ತ ಯುವಕ ಸೇವಾ ಸಂಘ ಹಾಗೂ ಶ್ರೀ ಶಿವಶರಣ ಹರಳಯ್ಯನವರ ಜಯಂತ್ಯೋತ್ಸವ ಸಮಿತಿಯಿಂದ ಮಂಗಳವಾರ ನಗರದ ಗೋವಾ ಹೋಟೆಲ್ ವೃತ್ತದಲ್ಲಿ ಸರಳ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಲಬುರಗಿಯ ಪೂಜ್ಯ ಶ್ರೀ ಶಿವಬಸವ ಹರಳಯ್ಯ ಮಹಾಸ್ವಾಮಿಗಳು ಮತ್ತು ಬಸವ ಮಂಟಪದ ಪೂಜ್ಯ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಶಿವಶರಣ ಹರಳಯ್ಯ ಸಂಯುಕ್ತ ಯುವಕ ಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಭೀಮಳ್ಳಿ, ಗೌರವಾಧ್ಯಕ್ಷ ಎಸ್.ಬಿ. ಸಮತಾ ಜೀವನ, ಪ್ರಧಾನ ಕಾರ್ಯದರ್ಶಿ ದೇವರಾಜ ಗೋಳಾ, ಸಮಾಜದ ಮುಖಂಡರಾದ ಶಿವರಾಯ ಕಟ್ಟಿಮನಿ, ಸೋಮನಾಥ ಎಲ್. ಕಟ್ಟಿಮನಿ, ರಾಮಚಂದ್ರ ಗೋಳಾ, ಅಂಬಣ್ಣಾ ಭಾವಿಮನಿ, ಪಧಾಧಿಕಾರಿಗಳಾದ ಸತೀಶ ಕೋಟಿ, ಶಿವಕುಮಾರ ಭಾವಿಮನಿ, ಕರಣಕುಮಾರ ಸೂರ್ಯವಂಶಿ, ಪ್ರಭಾಕರ ಭರ್ಗೆ, ಶಂಕರ ಕಣ್ಣಿ, ತರುಣ ಹರಳಯ್ಯ, ರಾಹುಲ ಕಟ್ಟಿಮನಿ, ಶ್ರೀಧರ ಕಟ್ಟಿಮನಿ, ಶರಣು ಹಾಗರಗುಂಡಾಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.