ಶ್ರೀ ಶಿವಯೋಗೇಶ್ವರ ಜಾತ್ರಾ ಮಹೋತ್ಸವ

ಬಾಗಲಕೋಟ,ಆ29: ತಾಲೂಕಿನ ಚಿಕ್ಕಮೂರಮಟ್ಟಿ ಗ್ರಾಮದಲ್ಲಿ ಶ್ರೀ ಶಿವಯೋಗೇಶ್ವರ ಜಾತ್ರಾ ಮಹೋತ್ಸವ ಸೋಮವಾರ ದಿವಸ ವಿಜೃಂಭಣೆಯಿಂದ ನೆರವೇರಿತು.
ಶ್ರಾವಣ ಮಾಸದ ಸೋಮವಾರ ದಿವಸ ಬೆಳಿಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಶ್ರೀ ಶಿವಯೋಗೀಶ್ವರ ಗದ್ದಗುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿತು. ನಂತರ ಮುತ್ತತ್ತಿಯ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಶಿವಯೋಗೀಶ್ವರರ ಬೆಳ್ಳಿಯ ಉತ್ಸವ ಮೂರ್ತಿಯ ಸಮರ್ಪಣೆ ನಡೆಯಿತು. ನಂತರ ಶ್ರೀಮಠಕ್ಕೆ ದೇಣಿಗೆ ನೀಡಿದ ಮಹನೀಯರಿಗೆ ಹಾಗೂ ಸದ್ಭಕ್ತರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾದಗಿಯ ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ಶ್ರೀಮಠದ ಮೊದಲನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಒಂದೇ ವರ್ಷದಲ್ಲಿ ಶ್ರೀ ಶಿವಯೋಗೇಶ್ವರರ ಬೆಳ್ಳಿಯ ಉತ್ಸವ ಮೂರ್ತಿ ಹಾಗೂ ಪಲ್ಲಕಿ ಮಾಡಿದ್ದು ನೋಡಿದರೆ ಶ್ರೀಮಠವು ಅತಿ ಬೇಗನೇ ಎತ್ತರಕ್ಕೆ ಬೆಳೆಯುವುದರಲ್ಲಿ ಸಂದೇಹವೇ ಇಲ್ಲ. ಇಂತಹ ನಿರ್ಜನ ಪ್ರದೇಶದಲ್ಲಿ ಒಳ್ಳೆಯ ವಾತಾವರಣದಲ್ಲಿ ಮಠ ನಿರ್ಮಾಣ ಆಗಿದೆ. ಚಿಕ್ಕಮೂರಮಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಾಯ, ಸಹಕಾರ ಸದಾ ಹೀಗೆ ಮುಂದೆಯೂ ಇರಲಿ, ಮಠದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಎಲ್ಲ ಭಕ್ತರಿಗೂ ಭಗವಂತನ ಅನುಗ್ರಹ ಸದಾ ಇರಲಿ ಎಂದರು. ಮುಂಬರುವ ದಿನಗಳಲ್ಲಿ ಶ್ರೀಮಠದ ಗೋಪುರ ಹಾಗೂ ತೇರಿನ ವ್ಯವಸ್ಥೆ ಮಾಡಲು ಸದ್ಭಕ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಠದ ಪ್ರಧಾನ ಅರ್ಚಕರಾದ ಮಂಜುನಾಥ ಸ್ವಾಮಿಗಳ ಹಿರೇಮಠ, ವಿಶ್ವೇಶ್ವರಯ್ಯ ಪಾಟೀಲ, ಗುರುಲಿಂಗಯ್ಯ ಸ್ವಾಮಿಗಳು, ಸಂಗಯ್ಯ ಸ್ವಾಮಿಗಳು, ಮಲ್ಲಯ್ಯ ಸ್ವಾಮಿಗಳು, ಬಸಯ್ಯ ಸ್ವಾಮಿ, ಶ್ರೀ ವಿಠ್ಠಲ ಕರೆಹೊಳಿ, ನಬಿಸಾಬ ವಾಲಿಕಾರ, ಮಲ್ಲನಗೌಡ ಗೌಡ್ರ, ಲಾಲಸಾಬ ಶಿವಪ್ಪ ಡೊಳ್ಳಿನ, ರಮಣ್ಣ ಗೌಡ್ರ, ಗಿಯಪ್ಪಗೌಡ ಸಂ. ಗೌಡ್ರ, ಶಶಿಕಾಂತ ಸಿ. ಗೌಡ್ರ, ಹಾಗೂ ಚಿಕ್ಕಮೂರಮಟ್ಟಿ, ಹಿರೇಮೂರಮಟ್ಟಿ, ಚಿಕ್ಕಹೊದ್ಲೂರ, ಹಿರೇಹೊದ್ಲೂರ, ಜಡ್ರಾಮಕುಂಟಿ ಗ್ರಾಮದ ಸಮಸ್ತ ಗುರು-ಹಿರಿಯರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.