ಶ್ರೀ ಶಿವಕುಮಾರಸ್ವಾಮಿಗಳ ಜನ್ಮದಿನೋತ್ಸವ

ಚಾಮರಾಜನಗರ, ಏ.2- ವೀರಶೈವ ಲಿಂಗಾಯತ ಯುವ ವೇದಿಕೆ ಹಾಗೂ ಅರಳಿಕಟ್ಟೆ ಗ್ರಾಮಸ್ಥರ ಸಹಯೋಗದೊಂದಿಗೆ ಇಂದು ಅರಳಿಕಟ್ಟೆ ಗ್ರಾಮದಲ್ಲಿ ಇಂದು ಶ್ರೀ ಶಿವಕುಮಾರಸ್ವಾಮಿಗಳ ಜನ್ಮದಿನೋತ್ಸವ ಹಾಗೂ ಯಡಿಯೂರು ಸಿದ್ದಲಿಂಗೇಶ್ವರ ಭಾವಚಿತ್ರ ಅನಾವರಣ ಕಾರ್ಯಕ್ರಮ ನಡೆಯಿತು.
ಶ್ರೀ ಶಿವಕುಮಾರ ಸ್ವಾಮಿಗಳು ಹಾಗೂ ಯಡಿಯೂರು ಸಿದ್ದಲಿಂಗೇಧಶ್ವರರ ಭಾವಚಿತ್ರಕ್ಕೆ ಪುμÁ್ಪರ್ಚನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಅರಳಿಕಟ್ಟೆ ಗುರುಮಲ್ಲಪ್ಪ ಅವರು ಶತಮಾನದ ಯುಗ ಪುರುಷ, ತ್ರಿವಿಧ ದಾಸೋಹಿ,ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು ಬದುಕಿದಷ್ಟು ಕಾಲ ಜಗತ್ತಿಗೆ ಮಾದರಿಯಾಗಿ ಅಕ್ಷರ,ಅನ್ನ ದಾಸೋಹದ ಮೂಲಕ ಕ್ರಾಂತಿ ಮಾಡಿ ಅಭಿನವ ಬಸವಣ್ಣ ಎನಿಸಿದರು.ಇವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರು ಅನುಸರಿಸಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಧಾರ್ಮಿಕ ಹಾಗೂ ದಾಸೋಹ ಕಾರ್ಯಕ್ರಮವು ನಡೆಯಿತು.
ವೀರಶೈವ-ಲಿಂಗಾಯತ ವೇದಿಕೆಯ ಗೌರವ ಅಧ್ಯಕ್ಷ ಗುರುಸ್ವಾಮಿ, ಜಿಲ್ಲಾ ಸಂಚಾಲಕರಾದ ಪ್ರಕಾಶ್, ಆನಂದ, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್‍ಸ್ವಾಮಿ, ಸಂಚಾಲಕರುಗಳಾದ ರಾಜಪ್ಪ, ರವಿ, ಮಂಜು, ಜಯಪ್ಪ ಸ್ವಾಮಿ, ಚೇತನ್, ಬಸವರಾಜು, ಗ್ರಾಮದ ಹಿರಿಯ ಮುಖಂಡರುಗಳಾದ ಗೌಡಿಕೆ ಬಸಪ್ಪ. ಶಾಂತಪ್ಪ, ಪಟೇಲ್ ಮಹದೇವಪ್ಪ, ಕೆಂಚಪ್ಪ ಹಾಜರಿದ್ದರು.