ಶ್ರೀ ಶಾಂತಲಿಂಗ ಶೀವಯೋಗಿ ದೇವಸ್ಥಾನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ

ಬೀದರ:ನ.30: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಹಾಗೂ ಶ್ರೀ ಶಾಂತಲಿಂಗ ಶೀವಯೋಗಿ ಕಮಿಟಿ, ಫತ್ತೆಪುರ ತಾ.ಜಿ.ಬೀದರ ವತಿಯಿಂದ ಸಾಮಾನ್ಯ ಯೋಜನೆಯಡಿ ಪ್ರಾಯೋಜಿತ ಸಾಂಸ್ಕøತಿಕ ಕಾರ್ಯಕ್ರಮವನ್ನು ಐತಿಹಾಸಿಕ ಶಾಂತಲಿಂಗ ಶೀವಯೋಗಿ ಮಠದಲ್ಲಿ ಅದ್ದೂರಿಯಾಗಿ ಜರುಗಿತು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಹಿರಿಯ ಜೀವಿಗಳೂ ಹಾಗೂ ಮುತ್ಸದ್ದಿಗಳಾದ ಶ್ರೀ ಶಿವಬಸಪ್ಪಾ ಪಾಟೀಲ ರವರು ಕಾರ್ಯಕ್ರಮವನ್ನು ಉದ್ಧಾಟಿಸಿ ನಮ್ಮ ಜಾನಪದ ಹಾಗೂ ಸಂಸ್ಕøತಿ ಉಳಿಯಬೇಕಾದರೆ ಇಂತಹ ಚಟುವಟಿಕೆಗಳನ್ನು ನೆರವೇರುತ್ತಿರಬೇಕು ಎಂದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನರಸಿಂಘರಾವ ಸುತಾರ ರವರು ವಹಿಸಿಕೊಂಡು ಆಗಮಿಸಿದ ಗಣ್ಯರಿಗು ಹಾಗೂ ಸಾರ್ವಜನಿಕರಿಗೆ ಸ್ವಾಗತ ಕೋರಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಶ್ರೀ ರಾಜು ಸ್ವಾಂಇ ಹಾಗೂ ಶ್ರೀ ವಿಶ್ವನಾಥ ಹಣಮಂತ ನಾವದಗೇರಿ ಇವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಯಶಸ್ವಿಯಾದರು.

ಈ ಕಾರ್ಯಕ್ರಮವನ್ನು ಶ್ರೀ ವಿಶ್ವನಾಥ ಚನ್ನಪ್ಪ ಗುಣಶೆಟ್ಟೆ ರವರು ಜಾನಪದ ಗಾಯನ, ಭಕ್ತಿ ಗೀತೆ, ಭಾವ ಗೀತೆಗಳನ್ನು ಹಾಡಿ ನೆರೆದವರ ಗಮನ ಸೆಳೆದರು.