ಶ್ರೀ ಶರಣ ಹರಳಯ್ಯ ವಸತಿಯಲ್ಲಿ ಸಂಭ್ರಮದ ಗಣೇಶೋತ್ಸವ

ಇಂಡಿ:ಸೆ.10:ಅಂದು ಬಾಲಗಂಗಾಧರ ತಿಲಕರು ಮನೆ ಮನೆಯಲ್ಲಿ ಇದ್ದ ಗಣಪ್ಪನನ್ನು ಸಾರ್ವಜನಿಕವಾಗಿ ತಂದು ದೇಶದ ಯುವಕರಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚುವ ಕೇಲಸ ತಿಲಕರು ಮಾಡಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿಡಿ ಪಾಟೀಲ ಹೇಳಿದರು. ತಾಲೂಕಿನ ಅಹಿರಸಂಗ ಗ್ರಾಮದ ಶರಣ ಹರಳಯ್ಯ ವಸತಿಯಲ್ಲಿ ಶ್ರೀಸಿದ್ದಿವಿನಾಯಕ ಯುವಕ ಸಂಘದ ಅಡಿಯಲ್ಲಿ, ಗಣೇಶೋತ್ಸವ ಕಾರ್ಯಕ್ರಮವನ್ನು. ಉದ್ಘಾಟಿಸಿ ಮಾತನಾಡಿದ ಅವರು ಸಿದ್ದಿವಿನಾಯಕ ಯುವಕ ಸಂಘದ ಯುವಕರು ಒಗ್ಗಟ್ಟಿನಿಂದ ಗಣೇಶ ಪ್ರತಿಷ್ಠಾಪನೆಮಯ ಮಾಡಿ ನಾಡಿಗೆ ಮಳೆ ಬೆಳೆ ಹಾಗೂ ರೋಗಗಳಿಂದ ಮುಕ್ತ ಮಾಡಲೇಂದು ಭಕ್ತಿ ಭಾವದಿಂದ ಆಚರಿಸುವುದು ಸಂತೋಷದ ಸಂಗತಿ. ಆದರೆ ಇಂದು ಗಣೇಶೋತ್ಸವದ ಕಾರ್ಯಕ್ರಮಗಳು ದೇಶ ಪ್ರೇಮ, ಪರಸ್ಪರ ಪ್ರೀತಿ ವಿಶ್ವಾಸ, ಭ್ರಷ್ಟಾಚಾರ ನಿರ್ಮೂಲನೆ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೋಡಗಬೇಕು ಎಂದು ಯುವಕರಿಗೆ ಕರೆನೀಡಿದರು.ಕಾರ್ಯಕ್ರಮದಲ್ಲಿ ಶಿವಯ್ಯ ಹಿರೇಮಠ, ಸಿದ್ದು ಡಂಗಾ ನಾಗಪ್ಪ ಕಾಡೇಗೋಳ,ಸ್ವಾಮನಿಂಗ ಕೋಡಹೊನ್ನ,ಸಿದ್ದರಾಯ ಕೋಡಹೊನ್ನ,ಅನೀಲಕುಮಾರ ಕೋಡಹೊನ್ನ, ಖಂಡೋಬಾ ಕೋಡಹೋನ್ನ, ಯಶವಂತ ಕಾಡೆಗೋಳ, ಅಮೋಘಸಿದ್ದ ಪೂಜಾರಿ,ಹಾಜಾಸಾಬ ಶೇಖ್,ಪಿಂಟೂ ಕೋಡಹೋನ್ನ,ಜೆಟ್ಟಪ್ಪ ಕೋಡಹೊನ್ನ, ಜಗನ್ನಾಥ ಕ
ಕೋಡಹೊನ್ನ, ಸಿದ್ದಪ್ಪ ಪೂಜಾರಿ ಮುಂತಾದ ನಾಯಕರು ಉಪಸ್ಥಿತರಿದ್ದರು