
ಆನೇಕಲ್., ಮೇ೨೧:ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡಾಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಶನೇಶ್ವರ ಸ್ವಾಮಿಯ ದೇವಾಲಯದ ೩೦ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಅಪಾರ ಭಕ್ತರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಇನ್ನು ವಿಶೇಷವಾಗಿ ಮಾಕಾಂಳಪ್ಪ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿತು.ಇದೇ ಸಂಧರ್ಭದಲ್ಲಿ ಶ್ರೀ ಶನೇಶ್ವರ ಸ್ವಾಮಿಯ ದೇವಾಲಯಕ್ಕೆ ಶ್ರೀ ಅಭಯ ಶನೇಶ್ವರ ಸ್ವಾಮಿಯ ಆಲಯ ಎಂದು ಮರು ನಾಮಕರಣ ಮಾಡಲಾಯಿತು.
ಶ್ರೀ ಶನೇಶ್ವರ ಸ್ವಾಮಿಯ ದೇವಾಲಯದ ೩೦ ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸ್ವಾಮಿಗೆ ಅಭಿಷೇಕ, ನೂತನ ರಥೋತ್ಸವ, ಪೂಜಾ ಕುಣಿತ, ಪಲ್ಲಕ್ಕಿ ಉತ್ಸವ, ಹೋಮ, ಕರಗ ಮಹೋತ್ಸವ, ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಶ್ರದ್ದಾ ಭಕ್ತಿಯಿಂದ ನೆರವೇರಿತು. ಇನ್ನು ವಾರ್ಷಿಕೋತ್ಸವ ಸಮಾರಂಭಕ್ಕೆ ಆಗಮಿಸಿದ ಭಕ್ತರಿಗೆ ಅನ್ನದಾಸೋಹ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗೌರಮ್ಮ ಮಾಂಕಾಳಪ್ಪ ಸ್ವಾಮಿಗಳು, ಸರಸ್ವತ್ತಮ್ಮ ಪಾಪರೆಡ್ಡಿ, ರಾಮಚಂದ್ರಾರೆಡ್ಡಿ, ಶ್ರೀಧರ್, ಜಗಕ್ಕ, ಸುಮನ್, ಜಯ ಚಂದ್ರಾರೆಡ್ಡಿ, ಶೋಬಕ್ಕ, ಮುನಿರಾಜು, ಅಣ್ಣಯ್ಯಪ್ಪ, ನಾರಾಯಣಸ್ವಾಮಿ, ಮಡಿವಾಳ ವೆಂಕಟಸ್ವಾಮಿ, ಮಂಜಣ್ಣ, ಹರಿ, ವಿಜಯ್, ರಾಜಮ್ಮ, ಮೋನಿಕಾ, ಗುರುಸ್ವಾಮಿ, ಶಿಲ್ಪ ನಾರಾಯಣಸ್ವಾಮಿ, ಸುಜಾತ ವೆಂಕಟೇಶ್, ಶ್ರೀನಿವಾಸ್, ರತ್ನಮ್ಮ, ಮುನಿಯಪ್ಪ.ಸರಸ್ವತ್ತಮ್ಮ, ಯಲ್ಲಮ್ಮ, ರಾಜಣ್ಣ, ಸರಿತಾ ವೆಂಕಟಸ್ವಾಮಿ, ಲತಾ ಶ್ರೀನಿವಾಸ್, ಮಣಿಕಂಠ, ಶಬರೀಶ್, ಗೌರಮ್ಮ, ಮುನಿಕೃಷ್ಣಪ್ಪ, ಎಚ್.ಮಾದೇಶ್ ಮತ್ತು ಭಕ್ತರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.