ಶ್ರೀ ಶನೇಶ್ವರಸ್ವಾಮಿ ಕಥಾ ಕಲಾಕ್ಷೇಪ

ಚಾಮರಾಜನಗರ, ಡಿ.29- ಪಟ್ಟಣದ ಕೊಳದ ಬೀದಿಯಲ್ಲಿರುವ ಸೆಲ್ವ ಅವರ ಎಣ್ಣೆಮಿಲ್‍ನಲ್ಲಿ ಶ್ರೀ ಶನೇಶ್ವರಸ್ವಾಮಿಯ ಕಥಾಕಲಾಕ್ಷೇಪ ಇಂದು ನಡೆಯಿತು.
ಶ್ರೀ ಶನೇಶ್ವರಸ್ವಾಮಿಗೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಇ?Á್ಟರ್ಥ ಸಿದ್ದಿಗೆ ಪ್ರಾರ್ಥಿಸಲಾಯಿತು. ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಸಹ ನಡೆಯಿತು. ಚಂದಕವಾಡಿಯ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ರಂಗರಾಮು ಅವರು ಕಥಾ ಕಲಾಕ್ಷೇಪ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸೆಲ್ವ ಅವರು, ಕಳೆದ 15 ವ?ರ್Àಗಳಿಂದಲೂ ಶ್ರೀ ಶನೇಶ್ವರಸ್ವಾಮಿ ಕಥಾ ಕಲಾಕ್ಷೇಪ ನಡೆಸಿಕೊಂಡು ಬರುತ್ತಿದ್ದು ಈ ಬಾರಿ ದೇಶಕ್ಕೆ ಹಾಗೂ ನಾಡಿಗೆ ಅಂಟಿರುವ ಕೊರೊನಾ ವೈರಸ್ ದೂರಾಗಿ ಜನ ಸಾಮಾನ್ಯರು ನೆಮ್ಮದಿ ಜೀವನ ನಡೆಸಲಿ ಎಂದು ಪ್ರಾರ್ಥಿಸಿ ವಿಶೇ?À ಪೂಜೆ ಸಲ್ಲಿಸಲಾಗಿದೆ ಎಂದರು.