ಶ್ರೀ ಶಕ್ತಿ ಯೋಜನೆಯ ಉಚಿತ ಬಸ್ಸು ಶಾಸಕರಿಂದ ಚಾಲನೆ

ಮಾನ್ವಿ ಜೂ ೧೧ :- ರಾಜ್ಯ ಸರ್ಕಾರ ಉಚಿತ ಯೋಜನೆಗಳಲ್ಲಿ ಒಂದಾಗಿರುವ ಮಹಿಳೆಯರಿಗಾಗಿ ಶ್ರೀ ಶಕ್ತಿ ಯೋಜನೆಯಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ವಿಭಾಗದ ಮಾನ್ವಿ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ಶಾಸಕ ಜಿ ಹಂಪಯ್ಯ ನಾಯಕ ಇವರು ಚಾಲನೆ ನೀಡಿದರು.
ಪಟ್ಟಣದ ಬಸ್ಸು ನಿಲ್ದಾಣದ ಒಳಗಡೆ ವೇದಿಕೆ ಕಾರ್ಯಕ್ರಮ ಮಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯನ್ನು ಇವತ್ತು ಶ್ರೀ ಶಕ್ತಿ ಯೋಜನೆಯ ಉಚಿತ ಸಂಚಾರಕ್ಕೆ ಚಾಲನೆ ನೀಡಿ ಮಾತಾನಾಡಿ ನಮ್ಮ ನಾಯಕರಾದ ಬೋಸರಾಜ ಇವರು ಸಚಿವರಾಗಿದ್ದು ಕ್ಷೇತ್ರದ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು..
ನಂತರ ದಂಡಧಿಕಾರಿ ಚಂದ್ರಕಾಂತ್ ಎಲ್ ಡಿ ಮಾತಾನಾಡಿ ಮುಂದಿನ ಮೂರು ತಿಂಗಳೊಳಗಾಗಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಅಲ್ಲಿಯವರೆಗೆ ನಿಮ್ಮ ಆಧಾರ್ ಕಾರ್ಡ್ ತೊರಿಸುವುದರ ಮೂಲಕ ಸಂಚಾರ ಮಾಡಬಹುದು ಎಂದರು..
ಇದಕ್ಕೆ ಮೊದಲು ಪಟ್ಟಣದ ಬಸವ ವೃತ್ತದಲ್ಲಿ ಕಾಂಗ್ರೆಸ್ ಶಾಸಕ ಜಿ ಹಂಪಯ್ಯ ನಾಯಕ ಹಾಗೂ ಹಿರಿಯ ನಾಯಕನ ಸಮ್ಮುಖದಲ್ಲಿ ಪ್ರತಿಭಟನೆ ಮಾಡುವುದರ ಮೂಲಕ ಎನ್ ಎಸ್ ಬೋಸರಾಜ ಇವರನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು..
ಈ ಸಂದರ್ಭದಲ್ಲಿ ಸಲಿಂ ಪಾಷ, ಸಬ್ಜಲಿ ಸಾಬ್ ಪುರಸಭೆ, ಶರಣಯ್ಯ ನಾಯಕ ಗುಡದಿನ್ನಿ, ಸೈಯಾದ್ ಪಾಟೀಲ ತಾ ಪಂ ಅಧಿಕಾರಿ, ಎ ಬಾಲಸ್ವಾಮಿ ಕೊಡ್ಲಿ, ಚಂದ್ರಶೇಖರ ದೊಡ್ಡಮನಿ ಶಿಕ್ಷಣಾಧಿಕಾರಿ, ಚಂದ್ರಕಾಂತ ಎನ್ ಡಿ ದಂಡಧಿಕಾರಿ,
ರಾಮನಗೌಡ ಘಟಕ ವ್ಯವಸ್ಥಾಪಕರು, ಹನುಮಂತರಾಯ, ರಾಮಾನುಜಾಯ್ಯ ಟಿ ಸಿ, ಸಿಬ್ಬಂದಿಗಳಾದ ಬಸಯ್ಯ ಸ್ವಾಮಿ, ದಸ್ತಗಿರಿ,ಶರಣಪ್ಪ, ವರಪ್ರಸಾದ್,ಮಲ್ಲಿಕಾರ್ಜುನ, ಸೇರಿದಂತೆ ಅನೇಕರು ಇದ್ದರು
ರಾಮಲಿಂಗಪ್ಪ ಶಿಕ್ಷಕರು ನಿರೂಪಣೆ ಮಾಡಿದರು.