ಶ್ರೀ ಶಂಕರಾಚಾರ್ಯರಿಂದ ದೇಶದಲ್ಲಿ ಆಧ್ಯಾತ್ಮಿಕ ಕ್ರಾಂತಿ

ಚಿತ್ರದುರ್ಗ.ಏ.29; ಶಂಕರಾಚಾರ್ಯರು ಬೋಧಿಸಿದ ತತ್ವ ಅದ್ವೈತ. ಶ್ರೀ ಶಂಕರಾಚಾರ್ಯರು ಭಾರತದಲ್ಲಿ ದೊಡ್ಡ ಆಧ್ಯಾತ್ಮಿಕ ಕ್ರಾಂತಿ ಮಾಡಿದರು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ರಾಜೀವಲೋಚನ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಆಯೋಜಿಸಲಾಗಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.8ನೇ ಶತಮಾನದಲ್ಲಿ ಭಾರತೀಯ ಸಮಾಜದಲ್ಲಿ ದೊಡ್ಡ ಜಾಗೃತಿ ಉಂಟು ಮಾಡಿದ ಕೀರ್ತಿ ಶ್ರೀ ಶಂಕರಾಚಾರ್ಯರಿಗೆ ಸಲ್ಲುತ್ತದೆ. ಶಂಕರಾಚಾರ್ಯರು ಬಿಟ್ಟುಹೋಗಿರುವ ಆಧ್ಯಾತ್ಮಿಕ ಚಿಂತನೆಗಳನ್ನು, ಆಧ್ಯಾತ್ಮಿಕ ಸತ್ಯಗಳನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕು. ಶಂಕರಾಚಾರ್ಯರು ಹೇಳಿದಂತೆ ಅರಿಷಡ್ವರ್ಗಗಳನ್ನು ನಾವು ಗೆಲ್ಲಬೇಕು ಎಂದರು.