ಶ್ರೀ ಶಂಕರದಾಸೀಮಯ್ಯ ಜಯಂತಿ ಆಚರಣೆ

ಹುಬ್ಬಳ್ಳಿ, ಆ2: ವೀರಶೈವ ಲಿಂಗಾಯತ ಬಣಗಾರ ಸಮಾಜದ ಕುಲಗುರು ಶ್ರೀ ಶರಣ ಶಂಕರ ದಾಸೀಮಯ್ಯ ಅವರ ಜಯಂತಿಯನ್ನು ಶ್ರಾವಣ ಮೊದಲನೆಯ ಸೋಮವಾರ ಹುಬ್ಬಳ್ಳಿಯ ಬಣಗಾರ ಸಮಾಜದವರು ವಿಜಂಬ್ರಣೆಯಿಂದ ಆಚರಿಸಿದರು.
ಶಂಕರ ಪೇಟ ಬ್ಯಾಳಿಓಣಿ ಶ್ರೀ ಜಢೇಯ ಶಂಕರ ಲಿಂಗನ ಗುಡಿಯಿಂದ ಶ್ರೀಶರಣ ಶಂಕರ ದಾಸೀಮಯ್ಯನ ಫೆÇೀಟೋ ದೊಂದಿಗೆ ಕುಂಭ ಮೇಳದಿಂದ ಮೆರವಣಿಗೆ ಪ್ರಾರಂಭವಾಯಿತು. ನಗರದ ಎರಡು ಎತ್ತಿನ ಮಠದ ಶ್ರೀ ಪೂಜ್ಯ ಬಸವಲಿಂಗಮಹಾಸ್ವಾಮಿಗಳು ಮೆರವಣಿಗೆ ಚಾಲನೆ ಮಾಡಿದರು.
ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಹಾದು ಕೊನೆಗೆ ಹಳೆ ಹುಬ್ಬಳ್ಳಿ ನಾರಾಯಣ ಪೇಟ ಶ್ರೀ ಜಡೇಯ ಶಂಕರ ಲಿಂಗ ದೇವಸ್ಥಾನಕ್ಕೆ ಬಂದು ಅಲ್ಲಿ ಸಮಾರೋಪ ಸಮಾರಂಭದಲ್ಲಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮಿಗಳು ಶ್ರೀ ಶಂಕರ ದಾಸೀಮಯ್ಯ ಜಯಂತಿ ಬಗ್ಗೆ ಹಾಗೂ ಮೂಢನಂಬಿಕೆ ಮಾತನಾಡಿ ಜನರನ್ನು ಜಾಗ್ರತಿ ಗೊಳಿಸಿದರು.ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯರಾದ ಶ್ರೀ ಮತಿ ರಾಧಾಬಾಯಿ ಸಪಾರೆ ಆಗಮಿಸಿದ್ದರು.
ಅನಿಲ ಕವಿಶೇಟ್ಟಿ ಸ್ವಾಗತಿಸಿದರು. ಷಣ್ಣಮುಖ ಹೂಲಿ ವಂದಿಸಿದರು. ಶ್ರೀ ಶೈಲ ಜೋಢಳ್ಳಿ ಕಾರ್ಯಕ್ರಮ ನಿರೂಪಿಸಿದರು ಸಮಾಜದ ಶ್ರೀ ಸುರೇಶ ಚನ್ನಿ, ಮಲ್ಲಿಕಾರ್ಜುನ ಶಿರಗಣ್ಣವರ, ಅನಿಲ್ ಮೂರಶಿಳ್ಳಿ, ರಾಜಶೇಖರ ಬಳ್ಳಾರಿ, ಎಮ್. ಎಸ್. ಗರಗ, ಶಿವಾನಂದ ಹೂಲಿ, ಸದಾನಂದ ದೊಡ್ಡಮನಿ, ಕೆರೂರ ಬಸವರಾಜ, ಹೂಲಿ, ರಾಜು ಗೋಂಬಿ, ವೀರಣ್ಣ ಹೂಲಿ ಹಾಗೂ ಸಮಾಜದ ಬಾಂಧವರು ಭಾಗವಹಿಸಿದ್ದರು.