
ಸಂಜೆವಾಣಿ ವಾರ್ತೆ
ಸಂಡೂರು : ಜ:3 ಪಟ್ಟಣದ 14ನೇ ವಾರ್ಡನ ಸ್ಮಯೋರ್ ಕಾಲೋನಿಯಲ್ಲಿರುವ ಶ್ರೀ ಭೂನೀಳಾ ಸಮೇತ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಉತ್ತರ ದ್ವಾರದ ದರ್ಶನವು ಅಗುವುದರಿಂದ ದಿ 2 ರಂದು ಬೆಳಿಗ್ಗೆ 10.30 ನಿ. ಸ್ವಾಮಿಯ ಮುಕ್ಕೋಟಿ ವೈಕುಂಠ ಏಕಾದಶಿ ಹಾಗೂ ನವಮಿ ವಾರ್ಷಿಕೋತ್ಸವದ ಪೂಜಾ ಕಾರ್ಯಕ್ರಮಗಳು ತಿರುಪತಿಯ ಪರಸಿದ್ದ ಹಾಗೂ ಅನುಭವವುಳ್ಳ ಪಂಡಿತರಾದಂಥಹ ತಮಿರಶ ಸೂರ್ಯಕುಮಾರ ಅರ್ಚಕರು ಇವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು, ವೈಕುಂಠ ಏಕಾದಶಿ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಪಡೆದು ಸ್ವಾಮಿಯ ಕೃಪೆಗೆ ಸಾವಿರಾರು ಭಕ್ತರು ಪಾತ್ರರಾದರು.
ಪೂಜಾ ಕಾರ್ಯಕ್ರಮಗಳು: ಇಂದು ಬೆಳಿಗ್ಗೆ 5.30 ನಿಮಿಷ ಸುಬ್ರಭಾತ , ತೋಮಲ ಅರ್ಚನೆ ಬೆಳಿಗ್ಗೆ 7.30ನಿಮಿಷಕ್ಕೆ ವಿಶ್ವಕ್ಸೇನಾ ಪೂಜೆ, ಪುಣ್ಯಾಹ, ಪಂಚಾಮೃತ ಅಭಿಮರ್ದನ, ವೆಂಕಟೇಶ್ವೆರ ಸ್ವಾಮಿಗೆ ಅಭಿಷೇಕ, ಅಗ್ನಿ ಪಯಣ, ಶಾಂತಿ, ಗಣಪತಿ ನವಗ್ರಹ ಮೃತ್ಯುಂಜಯ ಹೋಮ ಪಾರಮಾರ್ತಿಕ ಉಪ ನಿಷತ್ ಹೋಮ, ಕುಂಭಾರಾಧನೆ, ಪೂರ್ಣಹುತಿ, ಕುಂಭ ಸಮಾರೋಪ, ಮಧ್ಯಾಹ್ನ 12.30 ರಿಂದ 9ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮಗಳು ನೆರವೆರುವವು ಎಂದು ಪತ್ರಕಟಣೆಯಲ್ಲಿ ತಿಳಿಸಲಾಗಿದೆ. ಅಭಿಷೇಕ ಮಾಡಿಸುವವರು ಹಾಗೂ ಪೂಜಾ ಹೋಮಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವ ದಂಪತಿಗಳು ಭಾಗವಹಿಸಿ ಪೂಜೆ ಸಲ್ಲಿಸಿದರು.
ಪ್ರಮುಖವಾಗಿ ಬೆಳಿಗ್ಗೆ 5.30 ನಿಮಿಷಕ್ಕೆ ವಿಶೇಷ ಸುಪ್ರಭಾತ , ತೋಮಲ ಅರ್ಚನೆ ಬೆಳಿಗ್ಗೆ 7.30ನಿಮಿಷಕ್ಕೆ ವಿಶ್ವಕ್ಸೇನಾ ಪೂಜೆ, ಪುಣ್ಯಾಹ:, ಪಂಚಾಮೃತ ಅಭಿಮರ್ದನ, ವೆಂಕಟೇಶ್ವರಸ್ವಾಮಿಗೆ ಅಭಿಷೇಕ, ಅಗ್ನಿ ಪಯಣ, ಶಾಂತಿ, ಗಣಪತಿ ನವಗ್ರಹ ಮೃತ್ಯುಂಜಯ ಹೋಮ ಪಾರಮಾರ್ತಿಕ ಉಪ ನಿಷತ್ ಹೋಮ, ಕುಂಭಾರಾಧನೆ, ಪೂರ್ಣಹುತಿ, ಕುಂಭ ಸಮಾರೋಪ, ಮಧ್ಯಾಹ್ನ 12.30 ರಿಂದ 9ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಈ ಸಂದರ್ಭದಲ್ಲಿ ಶಾಸಕ ಈ.ತುಕರಾಂ ಅವರು ಭೇಟಿ ನೀಡಿ ವಿಶೇಷ ಪೂಜಾಕಾರ್ಯಗಳನ್ನು ಮಾಡುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ಅಲ್ಲದೆ ಕ್ಷೇತ್ರದ ಎಲ್ಲಾ ಭಕ್ತರು ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗುವ ಮೂಲಕ ಸಕಲ ಸಂಪತ್ತು, ಆರೋಗ್ಯ, ವಿದ್ಯೆ ಲಭಿಸಲಿ ಎಂದು ಪ್ರಾರ್ಥಿಸಿದರು. ದೇವಸ್ಥಾನದ ಎಲ್ಲಾ ಸಮಿತಿ ಸದಸ್ಯರು, ಹಲವಾರು ಗಣ್ಯರು ಉಪಸ್ಥಿತರಿದ್ದು.