ಶ್ರೀ ವೆಂಕಟೇಶ್ವರ ಬೋರವೇಲ್ಸ್ ನೂತನ ಶಾಖೆ ಉದ್ಘಾಟನೆ

ಹುಬ್ಬಳ್ಳಿ,ಡಿ 22: ಉತ್ತರ ಕರ್ನಾಟಕದ ಪ್ರಸಿದ್ಧ ಬೋರವೇಲ್ಸ್ ಕಂಪನಿಯಾದ ಶ್ರೀ ವೆಂಕಟೇಶ್ವರ ಬೋರವೇಲ್ಸ್‍ನ ನೂತನ ಶಾಖೆ ಕಛೇರಿಯ ಉದ್ಘಾಟನೆಯು ಹುಬ್ಬಳ್ಳಿ ನವನಗರದಲ್ಲಿ ದಿ. 20 ರಂದು ಜರುಗಿತ್ತು.
ಮೌಲಾನ ಶರೀಫರಾಜ್ ಇವರು ಖುರಾನ್ ಪಠಣದೊಂದಿಗೆ ಉದ್ಘಾಟನಾ ಕಾರ್ಯಕ್ರಮ ಪ್ರಾರಂಭವಾಯಿತು. ಹುಬ್ಬಳ್ಳಿಯ ಅಂಜುಮನ್ ಇ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಹಾಜಿ ಮಹ್ಮದ ಯುಸೂಫ ಸವಣೂರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಂಪನಿಯು ಬೋರವೇಲ್ಸ್‍ನಲ್ಲಿ ಅತ್ಯುತ್ತಮ ಸೇವೆಯಲ್ಲಿ ಅಭಿವೃದ್ಧಿ ಹೊಂದಿದ್ದು, ಇನ್ನು ಹೆಚ್ಚಿನ ಶಾಖೆಯನ್ನು ಹೊಂದಿ ಅಭಿವೃದ್ಧಿಗೊಳ್ಳಲಿ ಎಂದು ಶುಭ ಹಾರೈಸಿದರು.
ಹು.ಧಾ. ಪಶ್ಚಿಮ ಮತಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಆಗಮಿಸಿ ಶುಭ ಹಾರೈಸಿದರು. ಶ್ರೀ ವೆಂಕಟೇಶ್ವರ ಬೋರವೆಲ್ಸ್‍ನ ಮಾಲಿಕರಾದ ಅಲ್‍ಹಾಜ್ ಸಿ.ಎಸ್. ಮಹಬೂಬಬಾಷಾ, ಸಿ.ಎಸ್.ಚಾಂದಬಾಷಾ, ಸಿ.ಎಸ್.ಅಹ್ಮದಬಾಷ, ಜಿಲಾನ ಬಾಷಾ, ಜಾಪರ ಶರೀಫ್, ಸಿ.ಎಸ್.ನಾಶೀರುದ್ದಿರನ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನೂರಾನಿ ಮಸಜಿದ ಮುತವಲ್ಲಿ ಹಾಜಿ ಎಮ್.ಎಚ್.ನದಾಫ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶಿಶ ನವೀದ ಮುಲ್ಲಾ, ನವನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಕಿತ್ತೂರ, ನವನಗರ ಬ್ಲಾಕಿನ ಸೇವಾದಳದ ಅಧ್ಯಕ್ಷ ಈರಣ್ಣ ನಾಗನ್ನವರ, ಅಂಜುಮನ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಹಬೂಬಖಾನ್ ಪಠಾಣ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ನಜೀರಅಹ್ಮದ ಕೋಲಕಾರ, ಅಶ್ರಫ ಮುದ್ದೇಬಿಹಾಳ, ವಿಶಾಲ ಶಿಬಾರಗಟ್ಟಿ, ಇಂಜಿನಿಯರ್ ಎಫ್.ಬಾಗಲಕೋಟ, ಎಮ್.ಎಚ್.ಬುದಿಹಾಳ, ಎನ್.ಐ ನರಗುಂದ, ಇಬ್ರಾಹಿಂಸಾಬ ನದಾಫ್, ರಹಿಮಾನ ತಲವಾಯಿ, ಉಸ್ಮಾನ ಬೆಂಗೇರಿ, ರಫೀಕ ನದಾಫ್, ಕಾಶೀಮಸಾಬ ಪಿಂಜಾರ, ಹಸನಸಾಬ ನದಾಫ, ರಜೀಯಾಬೇಗಂ ಕೋಟಬಾಗಿ ಅವರು ಸೇರಿದಂತೆ ಇನ್ನು ಅನೇಕ ರಾಜಕೀಯ ಪಕ್ಷಗಳ ಧುರೀಣರು, ಗಣ್ಯಮಾನ್ಯರು, ವಿವಿಧ ಉದ್ಯಮಿಗಳು ಹಾಗೂ ಶ್ರೀ ವೆಂಕಟೇಶ್ವರ ಬೋರವೆಲ್ಸ್‍ನ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.