ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಸೆ2: ಪಟ್ಟಣದ ನೂಲ ಹುಣ್ಣಿಮೆ ನಿಮಿತ್ಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ಮಂಗಲ ವಾದ್ಯಮೇಳಗಳೋಂದಿಗೆ ಪುರವಂತರ ವೀರಾವೇಶದ ಒಡಪು, ಹೆಣ್ಣು ಮಕ್ಕಳ ಕರಡಿ ಮಜಲ್ ಹಾಗೂ ವಿವಿಧ ಜಾನಪದ ಮಜಲು ಗಜರಾಜನ ಗಂಭೀರ ನಡಿಗೆಯೊಂದಿಗೆ ಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಐದು ದಿನಗಳ ಕಾಲ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಅಲಂಕಾರ ಪೂಜೆ ಕೈಗೊಳ್ಳಲಾಗಿತ್ತು. ಶ್ರೀ ವೀರಭದ್ರೇಶ್ವರ ದೇವಸ್ಥಾನ ಜಿರ್ಣೋದ್ದಾರ ಸಮಿತಿ ಅಧ್ಯಕ್ಷರು ಸರ್ವ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು.