ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಮುನವಳ್ಳಿ,ಏ23 : ಸಮಿಪದ ತೋರಣಗಟ್ಟಿ ಗ್ರಾಮದ ಶ್ರೀ ವೀರಭದ್ರೆಶ್ವರ ಜಾತ್ರಾ ಮಹೋತ್ಸವ ದಿ. 22 ರಂದು ಪ್ರಾರಂಭವಾಗಿದ್ದು, ಇಂದು ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಸಾಮೂಹಿಕ ಗುಗ್ಗಳೋತ್ಸವ, ವೀರಗಾಸೆ ಶ್ರೀ ವೀರಭದ್ರೇಶ್ವರ ಜಾತ್ರೆ ಜರುಗುವದು,
ದಿವ್ಯ ಸಾನಿಧ್ಯ ಎಂ.ಚಂದರಗಿಯ ಶ್ರೀ ವೀರಭದ್ರೇಶ್ವರ ಶಿವಯೋಗಿ ಶಿವಾಚಾರ್ಯ ಶ್ರೀಗಳು, ನೇತೃತ್ವವನ್ನು ರೇವಣಸಿದ್ದೇಶ್ವರ ಮಠ ಕೊರಕೋಪ್ಪದ ಶ್ರೀ ರೇವಣಸಿದ್ದೇಶ್ವರ ಶ್ರೀಗಳು, ಅಧ್ಯಕ್ಷತೆಯನ್ನು ಟಿ.ಪಿ.ಮನ್ನೊಳಿ, ಗುರುರಕ್ಷೆಯನ್ನು ಸೋಮನಗೌಡ ಪಾಟೀಲ, ವಿಜಯಕುಮಾರ ಕಾರಕಾಯಿ, ಬಸಪ್ಪ ಚಂದರಗಿ ಇವರಿಗೆ ನೀಡುವರು, ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಳವಾಗುವದು ಎಂದು ಶ್ರೀ ವೀರಭದ್ರೇಶ್ವರ ಜಾತ್ರಾ ಕಮೀಟಿ ಯವರು ಪ್ರಕಟಣೆಯಲ್ಲಿ ತಿಳಿಸಿರುವರು.