ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಕಾರ್ಯಕ್ರಮ

ಹನೂರು: ನ.17:- ತಾಲೂಕಿನ ಮಂಗಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸಂಪೆÇ್ರೀಕ್ಷಣೆ ಹಾಗೂ ಕುಂಭಾಭಿಷೇಕ ಧಾರ್ಮಿಕ ವಿಧಾನಗಳೊಂದಿಗೆ ಶಾಸ್ತ್ರೋಕ್ರವಾಗಿ ನೆರವೇರಿತು.
ಈ ಹಿನ್ನಲೆ ವೀರಭದ್ರೇಶ್ವರ ಸ್ವಾಮಿಯ ವಿಗ್ರಹ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತಲ್ಲದೇ ದೇವಾಲಯವನ್ನು ವಿವಿಧ ಪುಷ್ಪ ಹಾಗೂ ತಳೀರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಇದರ ಜೊತೆಗೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗೆ 4.10 ರಿಂದ 5.58 ಗಂಟೆಗೆ ಸಲ್ಲುವ ಬ್ರಾಹ್ಮೀ ಮೂಹೂರ್ತದಲ್ಲಿ ಸ್ವಾಮಿಗೆ ಆಗ್ರೋದಕ, ತೀರ್ಥ ಸಂಗ್ರಹಣೆ, ಗೋ ಪ್ರವೇಶ, ಪುಣ್ಯಾಹ ಪೂಜೆ, ಪಂಚಬ್ರಹ್ಮ ಕಳಸ ಪೂಜೆ, ನವಗ್ರಹ ದೇವತಾ ಪೂಜೆ, ಮಹಾ ಮೃಂತ್ಯುಂಜಯ ಪೂಜೆ, ಏಕಾದಶಿ ರುದ್ರಾದೇವತಾ ಪೂಜೆ, ದಶ ದಿಕ್ಪಾಲಕ ದೇವತಾ ಪೂಜೆ, ಹೋಮ, ಹವನ ಸೇರಿದಂತೆ ಇನ್ನಿತರೆ ಪೂಜೆ ಕೈಕಂರ್ಯಗಳನ್ನು ನೆರವೇರಿಸಲಾಯಿತು.
ಬಳಿಕ ಸ್ವಾಮಿಗೆ ಕುಂಭಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಶತಮಾವಳಿ ಪೂಜೆಯನ್ನು ಸಲ್ಲಿಸಿ ಪಂಚಲಿಂಗು ಪ್ರತಿಷ್ಟಾಪನೆಯನ್ನು ನೆರವೇರಿಸಲಾಯಿತು. ಬಳಿಕ ಮಹಾಮಂಗಳಾರತಿ ಬೆಳಗಿಸಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು.
ಮಂಗಲ ಸೇರಿದಂತೆ ಹನೂರು, ಆನಾಪುರ, ಕಣ್ಣೂರು, ಚನ್ನಾಲಿಂಗನಹಳ್ಳಿ, ಗುಂಡಾಪುರ, ಬೂದುಬಾಳು ಹಾಗೂ ಇನ್ನಿತರೆ ಗ್ರಾಮಗಳಿಂದ ಅಗಮಿಸಿದ ಭಕ್ತರು ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಸ್ವಾಮಿಗೆ ಕೃಪೆಗೆ ಪಾತ್ರರಾದರು. ದೇವಾಸ್ಥಾನ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.