ಶ್ರೀ ವೀರಪುಲಿಕೇಶಿ ರಪುಕೇಶಿ ಮಹಕಾರಿ ಬ್ಯಾಂಕ್- 56ನೇ ವಾರ್ಷಿಕ ಸಭೆ


ಬಾದಾಮಿ,ಡಿ.25- ಎಲ್ಲ ನಿರ್ದೇಶಕರು ಹಾಗೂ ಗ್ರಾಹಕರ ಸಹಕಾರದಿಂದ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಸಹಕಾರಿ ಬ್ಯಾಂಕ್ ಪ್ರಗತಿದತ್ತ ಸಾಗುತ್ತಿದೆ ಎಂದು ಮಾಜಿ ಶಾಸಕ, ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.
ಅವರು ಬುಧವಾರ ನಗರದ ಶ್ರೀ ವೀರಪುಲಿಕೇಶಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕಿನ 56 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲರ ಸಹಕಾರ, ಬ್ಯಾಂಕಿನ ಸಿಬ್ಬಂದಿಗೆ ಸತತ ಶ್ರಮ, ನಿರ್ದೇಶಕರು, ಗ್ರಾಹಕರ ಸಹಕಾರದಿಂದ ನಮ್ಮ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ನಮ್ಮ ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕು ಉತ್ತಮ ಹಣಕಾಸಿನ ವಹಿವಾಟು ನಡೆಸುವ ಮೂಲಕ ಸಹಕಾರಿಗಳ ಸಹಕಾರದಿಂದ 193.69 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದರು. ನೆರೆ ಹಾವಳಿ ಹಾಗೂ ಕೋವಿಡ್ 19 ಸಂದರ್ಭದಲ್ಲಿ ಬ್ಯಾಂಕಿನ ವತಿಯಿಂದ ಪ್ರತ್ಯೇಕವಾಗಿ 5 ಲಕ್ಷ ರೂ ಹಾಗೂ ಬ್ಯಾಂಕಿನ ಸಿಬ್ಬಂದಿಯವರ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ಬಿ.ಎಸ್.ಅಂಗಡಿ ಪ್ರಸಕ್ತ ಸಾಲಿನ ವಾರ್ಷಿಕ ವರದಿ ಓದುತ್ತಾ ಮಾತನಾಡಿ ಸದಸ್ಯರು 18087, ಶೇರು ನಿಧಿ 1090.10 ಲಕ್ಷ ರೂ, ನಿಧಿಗಳು 3764.83 ಲಕ್ಷ ರೂ, ಠೇವುಗಳು 38633.66 ಲಕ್ಷ ರೂ, ಬರತಕ್ಕ ಸಾಲಗಳು 20536.37 ಲಕ್ಷ ರೂ, ದುಡಿಯುವ ಬಂಡವಾಳ 44036.83 ಲಕ್ಷ ರೂ ಇದ್ದು, 193.69 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದರು. ವೇದಿಕೆಯ ಮೇಲೆ ನಿರ್ದೇಶಕರಾದ ಡಿ.ಎಂ.ಪೈಲ್, ಎಂ.ಎಸ್.ಹಿರೇಹಾಳ, ಎನ್.ಎಂ.ಗೌಡರ, ಹುಚ್ಚಪ್ಪ ಬೆಳ್ಳಿಗುಂಡಿ, ವಿ.ಕೆ.ಬಾಗಲೆ, ಸೇರಿದಂತೆ ಎಲ್ಲ ನಿರ್ದೇಶಕರು ಹಾಜರಿದ್ದರು.
ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಎಂ.ಬಿ. ದೇಶಣ್ಣವರ, ಶಾಖಾ ವ್ಯವಸ್ಥಾಪಕರಾದ ಎ.ಎಂ.ಕಂಕಣಮೇಲಿ, ಎಸ್.ಎಸ್.ಕರಡಿ, ಸಂಜು ಬರಗುಂಡಿ ಸೇರಿದಂತೆ ಇನ್ನಿತರರು ಇದ್ದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಹಾಗೂ ಉನ್ನತ ಶಿಕ್ಷಣಕ್ಕೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬ್ಯಾಂಕಿನಿಂದ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.