
ಕೆಂಭಾವಿ:ಎ.20:ಸುರಪುರ ತಾಲೂಕು ವೀರಶೈವ ಲಿಂಗಾಯತ ಸಮಿತಿ ಹಾಗೂ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಸುರಪುರದ ರಂಗಂಪೇಟೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 16 ಅಡಿ ಎತ್ತರದ ಪಂಚಲೋಹದ ಅಶ್ವಾರೋಡ ಶ್ರೀ ವಿಶ್ವಗುರು ಬಸವಣ್ಣನವರ ಪುತ್ಥಳಿಯ ಭವ್ಯ ಮೆರವಣಿಗೆ ಕುರಿತು ಪಟ್ಟಣದ ಭೋಗೇಶ್ವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ, ಸಮಾಜದ ಬಹು ದಿನಗಳ ಕನಸಾಗಿದ್ದ ವಿಶ್ವಗುರು ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಳ್ಳುವ ಸಮಯ ಬಂದಾಗಿದೆ. ತಾಲೂಕಿನ ಎಲ್ಲ ಸಮಾಜದ ಬಾಂಧವರ ಸಹಕಾರದಿಂದ 16 ಅಡಿ ಎತ್ತರದ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಎಲ್ಲರ ಬೇಡಿಕೆಯಂತೆ ಸೋಲಾಪುರದಲ್ಲಿ ಸಿದ್ಧಪಡಿಸಲಾಗಿರುವ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುತ್ತಿದೆ. ಏ.22 ರಂದು ಬೆಳಿಗ್ಗೆ ಕೆಂಭಾವಿಯಿಂದ ಮೆರವಣಿಗೆ ಪ್ರಾರಂಭಿಸಿ ಮುದನೂರ, ಅಗ್ನಿ ಕ್ರಾಸ್, ಗುಂಡಲಗೇರಾ ಮೂಲಕ ಹುಣಸಗಿ ಪಟ್ಟಣಕ್ಕೆ ತಲುಪಿ ಅಲ್ಲಿಂದ ದೇವಾಪುರ ಮಾರ್ಗವಾಗಿ ಸುರಪುರ, ರಂಗಂಪೇಟಕ್ಕೆ ತಲುಪಲಿದೆ. ಏ.23 ಬಸವ ಜಯಂತಿ ದಿನ ಬೆಳಿಗ್ಗೆ 9 ಗಂಟೆಗೆ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಎದುರುಗಡೆ ಇರುವ ಬಸವೇಶ್ವರ ವೃತ್ತದಲ್ಲಿ ಪೂಜೆಯೊಂದಿಗೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಸಮಾಜದ ಎಲ್ಲ ಬಾಂಧವರು ಮೆರವಣಿಗೆಯಲ್ಲಿ ಕಾರು, ಬೈಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೊರಿದರು.
ಷ.ಬ್ರ.ಚನ್ನಬಸವ ಶಿವಚಾರ್ಯರು ಸಾನಿಧ್ಯ ವಹಿಸಿದ್ದರು. ವೇ.ಮೂ.ಚನ್ನಯ್ಯ ಚಿಕ್ಕಮಠ, ಸುಮಿತ್ರಪ್ಪ ಅಂಗಡಿ, ಸಂಗಣ್ಣ ತುಂಬಗಿ, ಬಾಬುಗೌಡ ಮಾಲಿಪಾಟೀಲ, ಶರಣಪ್ಪ ಬಂಡೋಳಿ, ರಮೇಶ ಸೊನ್ನದ, ಬೋಗಪ್ಪ ಅಸ್ಕಿ, ಗುರುಲಿಂಗಯ್ಯ ಇಂಡಿ, ಶಿವರಾಜ ಬೂದುರ, ಶಿವು ಕಲಕೇರಿ, ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ, ಗುರು ಕುಂಬಾರ, ಮಲ್ಲೇಶಪ್ಪ ಕಾಚಾಪುರ, ಶಂಕ್ರೆಪ್ಪ ದೇವೂರ, ಗೌಡಪ್ಪಗೌಡ ಅಸಂತಾಪುರ, ಭೀಮನಗೌಡ, ಮಲ್ಲನಗೌಡ, ನಾಗರಾಜ, ಸತ್ಯರಾಜ, ನೀಲಕಂಠ ಹುಣಸಗಿ ಸೇರಿದಂತೆ ಇತರರಿದ್ದರು.
ಪ್ರಮುಖರಾದ ಪ್ರಕಾಶ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಡಿ.ಸಿ.ಪಾಟೀಲ ನಿರೂಪಿಸಿದರು. ಸೂಗು ಇಂಡಿ ಸ್ವಾಗತಿಸಿದರು. ಜಗದೀಶ ಸೊನ್ನದ ವಂದಿಸಿದರು.